ನನಗಾಗಿಯೆ ಶಿಂಗರಿಸಿಕೊೞುವ
ಮುಖವೊಂದನ್ನು ಹುಡುಕುತ್ತಿರುವೆ.
ಸಾಯಂಕಾಲ ನಿರೀ ಕ್ಷೆ ಯಲ್ಲಿರುವ
ಬಾಗಿಲೊಂದು ಹುಡುಕುತ್ತಿರುವೆ..!
ಕನಸುಗಳಿಗೊಂದು ಪ್ರತಿಮೆಯ
ಪ್ರತಿಯೊಂದನ್ನು ಹುಡುಕುತ್ತಿರುವೆ.
ಚಿಗುರುವ ಮೊಗ್ಗುಗಳಿಗೊಂದು
ಸುಗಂಧವನ್ನು ಹುಡುಕುತ್ತಿರುವೆ..!!
ಜಗತ್ತಿನಲ್ಲಿರುವ ಹೆಸರುಗಳಲ್ಲಿ
ಹ್ರುದಯ ಮಿಡಿತದ ಹೆಸರೊಂದು ಹುಡುಕುತ್ತಿರುವೆ.
ಮುಖದಲಿ ಮೂಡಿದ ನಿರಿಗೆಗಳ ಸೆಳೆಯುವ
ಚುಂಬಕವೊಂದನ್ನು ಹುಡುಕುತ್ತಿರುವೆ..!!
ಕಣ್ಣೀರಪಸೆ ಇಂಗಿಸಿಕೊೞುವ
ಮುಗುಳ್ನಗೆಯ ಕಣ್ಣೆರಡ ಹುಡುಕುತ್ತಿರುವೆ.
ಹೀಗೊಂದಾಗಿರುವ ಕನಸುಗಳ
ಸಮುದ್ರವೊಂದು ಹುಡುಕುತ್ತಿರುವೆ...!!!
ಪ್ರತಿಕ್ರಿಯೆ (8)