ಹಸಿರು ತುಂಬಿದ ಹಾದಿಯಲಿ
ನಿನ್ಜೊತೆ ಹೆಜ್ಜೆ ಹಾಕುವ ಆಸೆ ಅಷ್ಟೆ..!
ನನ್ನಂತರಂಗವ ಬಿಚ್ಚಿಟ್ಟು
ಆಕಾಶದಗಲ ಬಾಯ್ಬಿಟ್ಟು
ಜೋರಾಗಿ ನಗುವ ಆಸೆ ಅಷ್ಟೆ..!
ಹನಿ ಹನಿ ಮಳೆಯಲಿ
ನಿನ್ಜೊತೆ ಕುಣಿದು ಕುಪ್ಪಳಿಸಿ
ಬಾಲ್ಯವ ಮತ್ತೆ ಕರೆಯುವ ಆಸೆ ಅಷ್ಟೆ..!
ಆಣೆಕಟ್ಟಿಂದ ಧುಮ್ಮಿಕ್ಕುವ ನೀರಿನಂತೆ
ಮೌನ ಮುರಿದು ಉಸಿರಾಡುವ ಆಸೆ ಅಷ್ಟೆ..!
ನೀ ತೋರಿಸುವ ಕನಸೂ ಬೇಡ ನನಗೆ.
ಏಕೆಂದರೆ....
ಅಲ್ಲಲ್ಲಿರುವ ಮಾರ್ದನೀಯತೆ
ನನಗೆ ದಕ್ಕಲಿಲ್ಲ;ನಿಲುಕಲಿಲ್ಲ...ಅಷ್ಟೆ..!!!
ಪ್ರತಿಕ್ರಿಯೆ (2)