ಕಮಲದಾ ಮೊಗದವನೆ

ಕಮಲದಾ ಕಣ್ಣವನೆ
ಕಮಲಜನ ಹೊಕ್ಕುಳಲಿ ಹಡೆದಿರುವನೇ
ಸುಮನಸನೆ  ನಿನ್ನಂದ-
ದಮಲ ಮುಖ ಕಂದಿದ್ದು    
ಕಮಲೆ  ಬಳಿಯಿಲ್ಲೆಂಬ ದುಗುಡದಲ್ಲೇ ?


-ಹಂಸಾನಂದಿ








ಕೊ: ಕಮಲೆ = ಕಮಲದಲ್ಲಿ ನೆಲೆನಿಂತವಳು, ಲಕ್ಷ್ಮಿ. ಕಮಲಜ=ಬ್ರಹ್ಮ.


ಕೊ.ಕೊ: ___LINK_OPEN_target="_blank" href="http://www.padyapana.com/"___ಪದ್ಯಪಾನದಲ್ಲಿ ಈ ಚಿತ್ರವನ್ನು ಕೊಟ್ಟು ಅದರ ಬಗ್ಗೆ ಒಂದು ಛಂದೋಬದ್ಧವಾದ ಕವಿತೆ ಬರೆಯಲು ಕೇಳಿದ್ದರು. ಅದಕ್ಕೆಂದು ಕುಸುಮ ಷಟ್ಪದಿಯಲ್ಲಿ ಒಂದು ಪ್ರಯತ್ನ ಇದು


ಕೊ.ಕೊ: ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿರುಪಾಯಿ ಅಂತ ಹಾಡಿದ್ದು ಬರೀ ಕೆ ಎಸ್ ನ ಒಬ್ಬರೇ ಅಲ್ಲ, ಆ ಮುಂಚೇನೂ ಎಷ್ಟೋ ಜನ ಅದನ್ನ ಒಪ್ಪಿಕೊಂಡಿದ್ದಾರೆ, ಆದ್ರೆ ಎಲ್ಲರಿಗೂ ಕವಿತೆ ಬರೆಯೋಕೆ ಬರೋದಿಲ್ಲ ___LINK_OPEN_target="_blank" href="http://hamsanada.blogspot.com/2011/02/blog-post_14.html"___ಅಂತ ಹಿಂದೆ ಒಂದು ಹರಟೆ ಬರೆದಿದ್ದೆ. ಅದನ್ನು ಓದಬೇಕಾದರೆ ಇಲ್ಲಿ ಚಿಟಕಿಸಿ.