ನಿನ್ನಲ್ಲಿರುವ ಮಧುವೆಲ್ಲಾ ಹೀರಿ ರಸ್ತೆಗೆ ಒಗೆದರು ಸಾಕಿ
ನನಗಾಗ ಗಿಡದಿಂದ ಉದುರಿದ ನೆನಪು ಸಾಕಿ.
ಆ ರಾಮನಿಂದಲೇ ನಮಗೆ ನ್ಯಾಯ ಒದಗಿಸಲಾಗಲಿಲ್ಲ
ನಮ್ಮನ್ನೆಲ್ಲಾ ಪಣಕ್ಕಿಟ್ಟು ಮಹಾಭಾರತ ನಡೆಸುವುದು ಹೊಸದಲ್ಲ ಸಾಕಿ.
ನಾವು ಉರಿದು ಬೂದಿಯಾಗುವ ಬಗೆಗೆ ಚಿಂತಿಸಲಿಲ್ಲ
ನಮಗೆ ಬದುಕು ಕಳೆದುಕೊಂಡವರ ಕೆಯ್ ಹಿಡಿದ ನೆಮ್ಮದಿ ಸಾಕು ಸಾಕಿ.
ಇವರ ಆಸೆಗಳನ್ನೇ ಹೊತ್ತೆವು,ಹೆತ್ತೆವು,ಬೆಳೆಸಿದೆವು
ನಮ್ಮ ಕಣ್ಣಿಂದುದುರುವ ಒಂದು ಹನಿ ಅರಿಯದಾದರು ಸಾಕಿ.
ನಮಗೆ ಮಾರುಕಟ್ಟೆಯನ್ನು ಮಾತ್ರ ಒದಗಿಸಿಕೊಡಬಲ್ಲರು ಇವರು
ಇವರಿಗಾಗಿಯೇ ಚಿಗುರಿದ ಕನಸುಗಳು ಕೊನೆಗೂ ಶುಭಹಾರ್ಯಿಸುತ್ತವಲ್ಲ ಸಾಕಿ
ಪ್ರತಿಕ್ರಿಯೆ (1)