ಹಬ್ಬದಲ್ಲಿ ಖುಶಿಯಾಗಿ ಹೋಳಿಗೆ-ತುಪ್ಪ ಸವಿದವರು...!!
ಈದ್ ನಲ್ಲಿ ಜೊತೆಯಾಗಿ ಸಿವಂಯ್ಯಾ ಕುಡಿದವರು..!!
ಹೋದರೆಲ್ಲಿ...ಒಂಟಿಯಾಗಿ ಬಿಟ್ಟು..?
ಸುಖದಲ್ಲಿ ನಲಿದವರು...
ದುಃಖದಲ್ಲಿ ನಲಿದವರು..
ಕಸ್ಟ-ಸುಖ ಸಮವಾಗಿ ಹಂಚಿಕೊಂಡವರು....
ಹೋದರೆಲ್ಲಿ..ಒಂಟಿಯಾಗಿ ಬಿಟ್ಟು..?!
ಈಗಿನ ಈ ಸುಖ
ರುಚಿ ಕಳೆದುಕೊಂಡಿದೆ..
ದುಃಖ ಸಹಿಸಲು.
ಹೊಯ್ದಾಡುತ್ತಿವೆ ಹ್ರುದಯಗಳು...
ನೆನೆಸುತಿವೆ ಪದೇ-ಪದೇ..
ಆ ಘಳಿಗೆಗಳ...!!
ಹಬ್ಬ-ಹರಿದಿನಗಳಲಿ
ಹೊಯ್ದಾಡುತ್ತಿದೆ ಹೊಗೆ.
ಆ ಹೊಗೆಯಾರಿಸಲು ಹೆಣಗಾಡುತ್ತಿದೆ
ಖಾಕಿ ಕಾವಲು.....
ಮಗುವೊಂದು ಅನಾಥವಾಗಿದೆ
ಭವಿಸ್ಯ ಕಾಣದೆ....!!
ಪ್ರತಿಕ್ರಿಯೆ (2)