ಇದು ಒಂದಲ್ಲ ಒಂದು ದಿನ ಮಾಡಲೇ ಬೇಕಾದದ್ದು .


ನಾನು ಇರುವದು ಹೇಗೆ, ಹೀಗೆ ಇರುವುದು ಏಕೆ,   ಎಂದೆಲ್ಲ  ನನ್ನನ್ನು ನಾನು  ತಿಳಿದುಕೊಳ್ಳುವುದು, ಸಾಮರ್ಥ್ಯ, ದೌರ್ಬಲ್ಯ, ಸಾಧ್ಯತೆಗಳನ್ನು ಅರಿತುಕೊಳ್ಳುವುದು, ಗುರಿಗಳನ್ನು ಗುರುತಿಸಿಕೊಳ್ಳುವುದು, ಅದಕ್ಕೆ ತಕ್ಕ ಕಾರ್ಯಕ್ರಮ ರೂಪಿಸಿಕೊಳ್ಳುವುದು,   ಇರುವ ಸಾಮರ್ಥ್ಯಗಳನ್ನು ಬಳಸಿಕೊಳ್ಳುವುದು, ಅಗತ್ಯ  ಸಾಮರ್ಥ್ಯಗಳನ್ನು ಗಳಿಸಿಕೊಳ್ಳುವುದು,  ದೌರ್ಬಲ್ಯಗಳನ್ನು ಮೀರುವುದು,  ರೂಪಿಸಿಕೊಂಡ ಕಾರ್ಯಕ್ರಮವನ್ನು ಜಾರಿಗೊಳಿಸಲು ಪ್ರಯತ್ನಿಸುವುದು,  ಇದುವೇ ಸತ್ಯದ ಸಾಕ್ಷಾತ್ಕಾರ. 

ಹೀಗೆ ಸತ್ಯವನ್ನು ತಿಳಿದುಕೊಳ್ಳುವುದು,  ಗುರುತಿಸಿಕೊಂಡ ಗುರಿಯನ್ನು ಸಾಧಿಸಿ ಸಾಕಾರಗೊಳಿಸುವುದು ಇದೇ ಮನುಷ್ಯಜೀವಿಯು  ಮಾಡಬೇಕಾದದ್ದು ಅನಿಸುತ್ತದೆ.

ಬಹುಶ: ಇದನ್ನು ಒಂದು ಕಡೆ ತೆಪ್ಪಗೆ ಕೂತು ಹರಿದಾಡುವ ಮನಸ್ಸಿಗೆ ಕಡಿವಾಣ ಹಾಕಿ ಒಂದೇ ವಸ್ತುವನ್ನು ನೆನೆಯುತ್ತ ಅದನ್ನೇ ಧೇನಿಸುವ ಧ್ಯಾನದ ರೀತಿಯಲ್ಲಿ ಮಾಡಬಹುದು. ಇಲ್ಲವೇ ಪ್ರಾಮಾಣಿಕವಾದ ಒಂದು ಆತ್ಮಕತೆಯನ್ನೋ  ದಿನಚರಿಯನ್ನೋ ಬರೆದುಕೊಳ್ಳುತ್ತ  ವಿಚಾರಗಳನ್ನು ದಾಖಲಿಸಿಕೊಳ್ಳುತ್ತ ತಿದ್ದುತ್ತ ತೀಡಿಕೊಳ್ಳುತ್ತ  ಸಾಧಿಸಬಹುದೇನೋ?