ಕನ್ನಡಿಗ ನೀ....
ಭಾರತಾಂಬೆಯ ಪ್ರಾಣ ಪದಕ..
ಭವ್ಯ ಸಂಸ್ ಕ್ರುತಿಯ ಕಣಜ...
ಕನ್ನಡಿಗ ನೀ...
ಸಂಪ್ರದಾಯದ ಹೊಸಿಲು ಮೆಟ್ಟಿ ಹೊರಗೆ ಬಾ...
ಧೂಪ,ದೀಪ,ಪೂಜೆ,ಪ್ರಾರ್ಥನೆ ಒಳಗಿತಟ್ಟು ಬಾ...
ನನ್ನ,ನಿನ್ನ,ಅವನ, ತೊರೆದು..
ನಾವುಗಳೆಂಬ ಹೊಸ ನಾಡು ಕಟ್ಟು ಬಾ..
ಪಂಪ-ರನ್ನರ ಪೆಂಪಿನ
ಕುವೆಂಪು-ಬೇಂದ್ರೆಯ ಕಂಪಿನ
ಜಗಜ್ಯೋತಿಯ ಸೊಡರ ಉರಿಸಿ
ಮನುಜ ಮತದ,ವಿಶ್ವಪಥವ ತೋರು ಬಾ...
ಕನ್ನಿಡಿಗ ನೀ...
ಹ್ರುದಯದಿಂದ ಹ್ರುದಯಕೆ ಕಸಿ ಮಾಡಿ
ಪ್ರೀತಿ-ವಾತ್ಸಲ್ಯದ ತುಂಬು ಬೆಳೆ ತೆಗೆದು
ಸೀಮಾತೀತಕ್ಕೆಲ್ಲಾ ಚೆಲ್ಲಿ
ಮಾನವೀಯತೆಗೊಂದು ಮುನ್ನುಡಿ ಬರೆಯ ಬಾ...
ಕನ್ನಡಿಗ ನೀ....
ಎಲ್ಲರೆದೆ ಹದಗೊಳಿಸಿ
ನುಡಿಪ್ರೇಮ,ನಾಡಪ್ರೇಮ,ದೇಶಪ್ರೇಮ
ಮನುಜಪ್ರೇಮವೆಂಬ
ಬೀಜಗಳ ನಾಟಿ ಮಾಡಿ
ಜಗದ್ವಂದ್ಯ ಕ್ರುಶಿಕನಾಗು ಬಾ....!!!
ಪ್ರತಿಕ್ರಿಯೆ (5)