ಒಂದೇ ಒಂದು ಕ್ಷಣ
ನಿನ್ನ ಪಕ್ಕದಲ್ಲಿರುವವನನ್ನು
ಬೇರೇನೂ ಬೇಡ..
ಮನುಷ್ಯನೆಂದೆಣಿಸು
ಅದು ನೀ ಮನುಷ್ಯನಾಗಿದ್ದಕ್ಕೆ
ಸಾಕ್ಷಿಯಾಗಿರಲಿ...!
* * * * *
ಗಾಯಗಳಿಗೆಂದೂ
ಮುಲಾಮು ಹುಡಕದಿರು..!
* * * * *
ತಾಯಿ-ತಂದೆ-ಗುರು
ಈ ಜಗತ್ತಿನ
ಗೀತೆ-ಬೈಬಲ್-ಕುರಾನ್
* * * *
ಹಸಿವೆಂದರೆ
ಒಂದು ರೊಟ್ಟಿ,
ದಾಹವೆಂದರೆ
ಗುಟುಕು ನೀರು..ಅಷ್ಟೇ!!
* * * *
ಹೆಮ್ಮೆ ಪಟ್ಟಿದ್ದೇನೆ ನಾನು
ತೇಪೆ ಹಚ್ಚಿದ ಬಟ್ಟೆಯಲ್ಲಿ
ಧಮ್ರ ಅರಸದಿರುವಿಕೆಗೆ...
ಬೆನ್ನಿಗಂಟಿದ ಹೊಟ್ಟೆಯಲ್ಲಿ
ಸ್ಥಾವರ ಅರಸದಿರುವಿಕೆಗೆ...
ದುಡಿಯುವ ಬೆವರಿನಲ್ಲಿ
ಬಣ್ಣ ಅರಸದಿರುವಿಕೆಗೆ...!!
* * * * *
ಹೆಣ್ಣಿರುವವರೆಗೂ..
ಇಳೆಗೆ ತಂಪಿದೆ.
ಪ್ರತಿಕ್ರಿಯೆ (5)