ಇರುವುದೇ ಮುಗಿತಾಯ ಮನದಾಸೆಗಳಿಗಿಲ್ಲಿ

ವರುಷ ಕಳೆದಿರಲೇನು ಸಾವಿರವೊ ಲಕ್ಷ ?

ನೆರವೇರಿರಲು ಒಮ್ಮೆ ಬಯಕೆಗಳ  ಸಾಲೊಂದು

ಮರಳಿ ಹುಟ್ಟುವುವಲ್ಲ ಮಗದೊಂದು ಸಾಲು!

 

ಸಂಸ್ಕೃತ ಮೂಲ (ವಿಷ್ಣುಪುರಾಣ, ೪-೨-೧೧೬):

 

ಮನೋರಥಾನಾಂ ನ ಸಮಾಪ್ತಿರಸ್ತಿ

ವರ್ಷಾಯುತೇನಾಪಿ ತಥಾಬ್ದ ಲಕ್ಷೈಃ ||

ಪೂರ್ಣೇಷು ಪೂರ್ಣೇಷು ಮನೋರಥಾನಾಂ

ಉತ್ಪತ್ತಯಃ ಸಂತಿ ಪುನರ್ನವಾನಾಮ್ ||

 

 

-ಹಂಸಾನಂದಿ

 

 

ಕೊ: ___LINK_OPEN_href="http://haridasa.sampada.net/%E0%B2%A6%E0%B2%BE%E0%B2%B8%E0%B2%B8%E0%B2%BE%E0%B2%B9%E0%B2%BF%E0%B2%A4%E0%B3%8D%E0%B2%AF/%E0%B2%AC%E0%B2%BF%E0%B2%A8%E0%B3%8D%E0%B2%A8%E0%B2%B9%E0%B2%95%E0%B3%86-%E0%B2%AC%E0%B2%BE%E0%B2%AF%E0%B2%BF%E0%B2%B2%E0%B3%8D%E0%B2%B2%E0%B2%B5%E0%B2%AF%E0%B3%8D%E0%B2%AF/445" target="_blank"___ಬಿನ್ನಹಕೆ ಬಾಯಿಲ್ಲವಯ್ಯ ಅನ್ನುವುದು ಪುರಂದರದಾಸರ, ಕಾಂಭೋಜಿ ರಾಗದಲ್ಲಿ ಹಾಡುವ ಒಂದು ಪ್ರಸಿದ್ಧ ರಚನೆ. ಅದರ  ಕೊನೆಯ ಚರಣ "ಇಷ್ಟುದೊರಕಿದರೆ ಇನ್ನಷ್ಟು ಬೇಕೆಂಬಾಸೆ" ಅನ್ನುವ ಸಾಲು ಈ ಪದ್ಯದ ಹುರುಳಿಗೆ ಬಲು ಹತ್ತಿರವೆನ್ನಿಸಿ ಆ ತಲೆಬರಹ ಕೊಟ್ಟಿದ್ದೇನೆ.

 
ಕೊ.ಕೊ: ಮೂಲದಲ್ಲಿದ್ದ ಹತ್ತುಸಾವಿರ ವರ್ಷ (ಆಯುತ)ವನ್ನು ನಾನು ಕನ್ನಡದಲ್ಲಿ ಸಾವಿರವಾಗಿಸಿದ್ದೇನೆ. ಇದರಿಂದ ಅರ್ಥಕ್ಕೇನೂ ಹೆಚ್ಚಿನ ಕೊರತೆಯಾಗದೆಂದು ನನ್ನೆಣಿಕೆ.