ಮೊಗದಲ್ಲಿ ಮುಗುಳುನಗೆ ಕುಡಿನೋಟದೋಲಾಟ
ಬಗೆ ಸೆಳೆವ ನುಡಿಯೊನಪು ಬೆಡಗು ವಯ್ಯಾರ
ಚಿಗುರಂತೆಸೆವ ನಡಿಗೆ ಹೊಸಹರೆಯ ಮುಟ್ಟಿರುವ
ಚಿಗರೆಗಣ್ಣಿಯರಲ್ಲದಾವ ಸೊಗಸಿರದು?

 

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕ, ೬):

ಸ್ಮಿತಂ ಕಿಂಚಿದ್ವಕ್ತ್ರೇ ಸರಲತರಲೋ ದೃಷ್ಟಿ ವಿಭವಃ
ಪರಿಸ್ಪಂದೋ ವಾಚಾಮಾಭಿನವ ವಿಲಾಸೋಕ್ತಿ ಸರಸ: |
ಗತಾನಾವಾರಂಭಃ ಕಿಸಲಯಿತ ಲೀಲಾ ಪರಿಕರಃ
ಸ್ಪೃಶಂತ್ಯಾಸ್ತಾರುಣಂ ಕಿಮಿವ ನ ಹಿ ರಮ್ಯಂ ಮೃಗದೃಶಃ ||

-ಹಂಸಾನಂದಿ

ಕೊ: ಬಗೆ = ಮನಸ್ಸು ಅನ್ನುವುದಕ್ಕೊಂದು ಅಚ್ಚಕನ್ನಡದ್ದೇ ಪದ.
ಕೊ.ಕೊ : ಮೊದಲ ಸಾಲಿಗೆ "ಸ್ಮಿತಂ ಕಿಂಚಿನ್ಮುಗ್ಧಂ." ಎನ್ನುವ ಪಾಠಾಂತರವೂ ಇದೆ. ಅರ್ಥದಲ್ಲಿ ಬಹಳ ಹೆಚ್ಚಿನ ಬದಲಾವಣೆಯಾಗದು.