ನನ್ನ ಕಣ್ಣ ಹನಿಗಳಿಗೆ ಶವದ ಮುಂದೆ ಅತ್ತ ನೆನಪಿಲ್ಲ.
ಬದುಕುತ್ತಿರುವ ಬದುಕುಗಳ ನೆನೆದು ಅತ್ತ ನೆನಪಿದೆ.
ಗಿಡದ ಟೊಂಗೆಗಳು ಬೇರಿನ ರುಣಕ್ಕಾಗಿ ಬಾಗಿದ್ದು ನಿಜ....
ಮಣ್ಣಿಗೆ ಎಲ್ಲಾ ವಾಸನೆಯ ಪರಿಚಯದಿಂದ ಅತ್ತ ನೆನಪಿದೆ.
ಇಂಗಿದವು ಅದಶ್ಟೋ ಹನಿಗಳು ಕೆನ್ನೆಗಳ ಮೇಲೆ...
ದಳಗಳ ಮೇಲೆ ಬಿದ್ದ ಇಬ್ಬನಿಗಳ ನೆನೆದು ಅತ್ತ ನೆನಪಿದೆ.
ಈ ಲೋಕ ನೀ ರಚಿಸಿದ ಸುಂದರ ಚಿತ್ರಕಾವ್ಯ...
ಸೋತ ಬೆವರಲ್ಲಿ ಕಣ್ಣಹನಿ ಬೆರೆತಾಗ ಅತ್ತ ನೆನಪಿದೆ.
ಊರು ಸುಂದರವಾಗಿಸಲು ಅನೇಕ ಕಟ್ಟಡಗಳಿವೆ...
ಊರ ಹೊರಗಿನ ಗುಡಿಸಲುಗಳ ನೆನೆದು ಅತ್ತ ನೆನಪಿದೆ.
ಪ್ರತಿಕ್ರಿಯೆ (9)