ನನ್ನದು ಮೌನದ ಮಾತು
ಅವಳದು ಮಾತಿನ ಮೌನ
ನನ್ನ ಮಾತು ಅವಳ ಮೌನದಷ್ಟು ವಿರಳ
ಅವಳ ಮೌನ ನನ್ನ ಮಾತಿನಷ್ಟು ಸರಳ
ಅವಳು ಕೇಳುತ್ತಾಳೆ 'ಯಾಕೀ ಮೌನ'?
ನಾನು ಕೇಳುತ್ತೇನೆ 'ಯಾಕೀ ಮಾತು'?
ಅವಳ ಪ್ರಶ್ನೆಗೆ ನನ್ನ ಮೌನವೇ ಉತ್ತರ
ನನ್ನ ಪ್ರಶ್ನೆಗೆ ಅವಳ ಮಾತೇ ಉತ್ತರ
ಒಟ್ಟಿನಲ್ಲಿ ನಮ್ಮದು
"ಮಾತಿನ ಮೌನ ಮತ್ತು ಮೌನದ ಮಾತು"