ನಿನ್ನನ್ನು ಮರೆತು ಬಿಡಬೇಕು

ನೆನಪೇ ಮಾಡಿಕೊಳ್ಳಬಾರದು

ಎಂದುಕೊಳ್ಳುತ್ತೇನೆ

ನಿರಂತರ ಪ್ರಯತ್ನಿಸುತ್ತೇನೆ

ಆದರೆ ನಾನು ಸೋಲುತ್ತೇನೆ

ನೀನು ಹಾಗೇಕೆ ಮಾಡಿದೆ?

ಅದೂ ನನ್ನಂಥಹ ನನಗೆ

ನೀನು ನನ್ನನ್ನು ಹೇಗೆ ಮರೆತೆ

ನೆನಪು ಮಾಡಿಕೊಳ್ಳದಷ್ಟೂ

ಬೇಜಾರೆ ನನ್ನ ಮೇಲೆ?

ಎಷ್ಟೊಂದು ಹಚ್ಚಿಕೊಂಡಿದ್ದೆ

ಪ್ರಾಣ ಸ್ನೇಹಿತನ ಕಿವಿಮಾತಿಗೆ

ಕಿವಿಗೊಟ್ಟಿರಲಿಲ್ಲ ನಾನು

ಕನಸಿನಲೂ ನೀನು ಹೀಗೆ

ಮಾಡುವೆಯೆಂದು ಯೋಚಿಸಿಯೇ

ಇರಲಿಲ್ಲ; ಹೋಗಲಿ ಬಿಡು

ನಿನ್ನ ಆ ದಿನಗಳ ಮಧುರ

ನೆನಪುಗಳ ಜೊತೆಯೇ ಉಳಿದ

ದಿನಗಳನ್ನು ಸವೆಸಿಬಿಡುತ್ತೇನೆ

ಒಂದು ಮಾತು; ನನ್ನ ಹೃದಯದ

ಬಾಗಿಲು ನಿನಗಾಗಿ ತೆರದೇ

ಇರುತ್ತದೆ, ನೀನು ಹೇಗೆ ಬಂದರೂ

ಯಾವಾಗ ಬಂದರೂ ಸರಿಯೇ

ಮತ್ತೆ ನಿನ್ನ ಮರೆಯುವ ನನ್ನ

ವ್ಯರ್ಥ ಪ್ರಯತ್ನವನ್ನು ಇಲ್ಲಿಗೇ

ಬಿಡುತ್ತಿರುವೆ, ನೀನು ನನ್ನನ್ನು

ಸುಳಿವೂ ಕೊಡದೆ ಬಿಟ್ಟೆಯಲ್ಲ

ಹಾಗೆ......