ಖಾಲಿ ಕವಿ(ತೆ)

ನಾನು ತುಂಬ ಬರೆಯುತ್ತೇನೆ
ಬಹಳಷ್ಟು ಸಲ
ಕೊನೆಗೊಮ್ಮೆ ಅರಿವಾಗುತ್ತದೆ
ಅದು ತುಂಬು ಬರಹವಲ್ಲವೆಂದು
ನನ್ನ ಬರಹ ಬಹಳಷ್ಟು ಸಲ
ಖಾಲಿ ಖಾಲಿ
ನೀವು ಅದನ್ನು ತುಂಬಿಸಲೆಂದು
ಕೆಲವೊಮ್ಮೆ ಅದು ಮೌನಿ, ನನ್ನಂತೆ

ನೀವೇ ಅದನ್ನು ಮಾತನಾಡಿಸಲೆಂದು
ನಾನು ಬರೆದೂ ಬರೆದೂ ಖಾಲಿಯಾಗುತ್ತೇನೆ
ಖಾಲಿಯಾದಂತೆಲ್ಲ ಅಕ್ಷರಗಳು ಪದಗಳಾಗಿ
ಪದಗಳು ಪದ್ಯಗಳಾಗಿ ಹೊರಹೊಮ್ಮುತ್ತಲೇ ಇರುತ್ತವೆ 
ಖಾಲಿ - ಕವಿತೆಗಳಾಗಿ
ನಿಜ ಹೇಳಬೇಕೆಂದರೆ
ನಾನು ಖಾಲಿ ಕವಿ
ಈಗೆ ಬರೆಯುವುದು ನನ್ನದೊಂದು ಖಯಾಲಿ