ತಿಳಿನಗೆಯ ಹೂಮೊಗದಿ ಕರುಣೆಯನು ಚೆಲ್ಲುತ್ತ
-ರಳಿದೆರಡು ತಾವರೆಯ ಹೋಲ್ವ ಕಣ್ಣುಗಳು
ಬಳಿ ಸಾರಿ ನಿಂದವರ ಕೂಗಿ ಹೇಳುತಲಿಹವು
ಅಳಿದಿರಲಿ ಮನದೊಳಗಿನೆಲ್ಲ ತಾಪಗಳು!
-ಹಂಸಾನಂದಿ
ಕೊ: ಈ ವಾರದ ___LINK_OPEN_data-blogger-escaped-target="_blank" href="http://padyapaana.com/?p=1317#comments"___ಪದ್ಯಪಾನದಲ್ಲಿ ಕೊಟ್ಟ ಚಿತ್ರಕ್ಕೆ ಉತ್ತರವಾಗಿ ನಾನು ಬರೆದಿದ್ದಿದು. ಪಂಚಮಾತ್ರಾ ಚೌಪದಿ ಛಂದಸ್ಸಿನಲ್ಲಿದೆ.
ಕೊ: ಈ ನಸುನಗೆಯ ಮೊಗದ ದೇವಿಗೆ ದುರ್ಗೆ ಎಂಬ ಹೆಸರೇ ಸರಿಯಿಲ್ಲ ಎನ್ನಿಸುತ್ತಿದ್ದಾಗಲೇ ಕಾಳಿದಾಸನ(ದೆನ್ನಲಾದ) ಕಮಲೇ ಕಮಲೋತ್ಪತ್ತಿಃ ನೆನಪಿಗೆ ಬಂದು ಈ ಚೌಪದಿಯನ್ನು ಬರೆದೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!