ಕುಮಾರರಾಮನ ಬಗ್ಗೆ ನನಗೆ ಹೆಚ್ಚು ಗೊತ್ತಿರಲಿಲ್ಲ . ಮಲತಾಯಿಯ ಮೋಹಕ್ಕೆ ಗುರಿಯಾದವ ಒಬ್ಬ ಐತಿಹಾಸಿಕ ವ್ಯಕ್ತಿಯ ಕತೆ , ಇತ್ತೀಚೆಗೆ ಚಲನಚಿತ್ರವಾದದ್ದು ಇಷ್ಟೇ ಗೊತ್ತಿತ್ತು . ನನಗೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ನಾಗರಮರಿ ಹೆಸರಿನ ಪುಸ್ತಕ ಸಿಕ್ಕಿತು. ಅಲ್ಲಿ ಕುಮಾರರಾಮ ಮತ್ತು ಕನ್ನಡನಾಡಿನ ಬೇರೆ ಮೂವರು ವೀರರ ಕತೆ ಇದೆ. ಯವನರ ಕಾಟದಿಂದ ಕನ್ನಡಜನರನ್ನು ಕಾಪಾಡಲು ಈಶ್ವರಪಾರ್ವತಿಯರು ಷಣ್ಮುಖನನ್ನು ಕುಮಾರರಾಮನಾಗಿ ಅವತಾರವೆತ್ತಲು ಕಳಿಸುವರಂತೆ. 'ಮಲತಾಯಿಯು ಅವನನ್ನು ಕೆಟ್ಟಕಣ್ಣಿನಿಂದ ನೋಡಿದಳು. ಆದರೆ ಅವನು ಆಕೆಯ ಬಲೆಗೆ ಸಿಲುಕಲಿಲ್ಲ' ಎಂದು ಹೇಳಿ ಕತೆಯನ್ನು ಮುಂದುವರೆಸಿದ್ದಾರೆ. ಅವನ ಎರಡು ಪುಟದಕತೆಗೆ ಹಿಂದೆ ೧೦ ಪುಟ ಮುಂದೆ ೧೦ ಪುಟ ತಿಂದಿದ್ದಾರೆ! ಎರಡನೆಯ ಕತೆಯೂ ಅದೇ ತರಹ ಇದೆ! ಇನ್ನೆರಡನ್ನು ನಾನು ಓದಲಿಕ್ಕೆ ಹೋಗಲೇ ಇಲ್ಲ!! ಇದರಿಂದಾಗಿ 'ಪುಸ್ತಕ ಬರೆಯುವದು ಹೇಗೆ ? ( ಪುಟಗಳನ್ನು ತುಂಬಿಸುವದು ಹೇಗೆ?) ಎಂಬಂತಹ - ನಾ.ಕಸ್ತೂರಿಯವರ ಯದ್ವಾ-ತದ್ವಾ ದ ಹಾಸ್ಯಲೇಖನ ನೆನಪಾಗುತ್ತದೆ! ಆ ಪುಸ್ತಕ ಈಗಾಗಲೇ ಓದಿರದಿದ್ದರೆ ಓದಿ - ನಕ್ಕೂ ನಕ್ಕೂ ಸುಸ್ತಾಗುತ್ತದೆ - ಕತೆ ಬರೆಯುವದು ಹೇಗೆ ? ಕವನ ಬರೆಯುವದು ಹೇಗೆ ? ಎಂಬ ಬಗ್ಗೆ ಬಹಳ ಮುಖ್ಯವಾದ ಮಾರ್ಗದರ್ಶನ ಅಲ್ಲಿದೆ. ಅದಕ್ಕೇ ಸದರಿ ನಾಗರಮರಿ ಪುಸ್ತಕದ ಬದಲು ಯದ್ವಾ-ತದ್ವಾ ದ ಲಿಂಕ್ ಕೊಡುತ್ತಿದ್ದೇನೆ . ಓದಿ ಎಂಜೊಯ್ ಮಾಡಿ. ___LINK_OPEN_href="http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020027562" target="_blank"___ಇಲ್ಲಿ ಕ್ಲಿಕ್ಕಿಸಿ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪುಸ್ತಕನಿಧಿ : ಧರ್ಮಸಾಮ್ರಾಜ್ಯಮ್ ಅಥವಾ ಜಪಾನರುನ್ನತಿಗೆ ಮೂಲಾಧಾರ
ಪುಸ್ತಕನಿಧಿ : ತಾರೋತ್ಪತ್ತಿ ನಾಟಕ
ಪುಸ್ತಕನಿಧಿ : ಏಪ್ರಿಲ್ 1960ರ ಕಸ್ತೂರಿ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!