ಮುಗ್ಧ ಮನಸ್ಸಲ್ಲಿ ಬರೆಯುತ್ತಾನೆ

ಕವಿ ಭಾವನೆಗಳೇ ತುಂಬಿ...

ಒಲವಿಲ್ಲದ ಎದೆಯಲ್ಲೂ

ನಲಿವು ಬಿತ್ತುತ್ತಾನೆ ಕವಿ

ಕಲ್ಪನೆಗಳ ಸುತ್ತ ಬದುಕುತ್ತಾ

ಅನುಭವ ಬುತ್ತಿಯನ್ನು ಮೇಯುತ್ತಾ

ಬರೆಯುತ್ತಾನೆ ನನ್ನಂತೆ ...

ತಪ್ಪು ವ್ಯಾಖ್ಯಾನಗಳಿಗೆ ಬಲಿಯಾಗಿ

ಕೆಲವೊಮ್ಮೆ ನೊಂದುಕೊಳ್ಳುತ್ತಾನೆ...

ಪ್ರೀತಿಗೆ ಕರಗುವ ಮನವಿದೆ ಇಲ್ಲಿ...

ಅದರೊಳಗೆ ಟೀಕೆ ಟಿಪ್ಪನಣಿಗಳನು

ಎದುರಿಸುವ ಶಕ್ತಿಯೂ ಇದೆ

ಓದುಗನನ್ನೆಳೆಯುವ ಆಕರ್ಷಣೆ ಇದೆ

ಎಲ್ಲೋ ಒಂದು ಮೂಲೆಯಲ್ಲಿ

ಆರ್ದ್ರತೆ ಇಣುಕಿದೆ

ಓದುಗನೋ ಮಹಾಬುದ್ಧಿವಂತ.... ನಿಜ

ಆದರೆ ಕೆಲವೊಮ್ಮೆ ಎಡವಿಬಿದ್ದು

ಪೆದ್ದನಂತಾಡುತ್ತಾನೆ!

ನಾನೂ ಕೂಡಾ ಕವಿಯಾಗಿ

ಏನೋ ಬರೆಯುತ್ತೇನೆ

ನನಗನ್ನಿಸಿದ್ದನ್ನು ಗೀಚುತ್ತೇನೆ... 

ನನ್ನ ಕವನಗಳಿಗೆ

ನಕಾರಾತ್ಮಕ ಬಣ್ಣ ಬಳಿದಾಗ

ಒಳಗೊಳಗೇ ಮರುಗುತ್ತೇನೆ...

ಆದರೆ ಏನಾಶ್ಚರ್ಯ!

ನಾನೇ ಓದುಗಳಾದಾಗ

ನನಗರಿವಿರದೆ ಜಾರಿಬೀಳುತ್ತೇನೆ !

ಕಥೆಯಲ್ಲವಿದು ಕವನ ಎಂಬುದನ್ನೇ

ಮರೆತುಬಿಡುತ್ತೇನೆ !

ಇದು ಎಲ್ಲರ ಪಾಡು

ಸತ್ಯಾಸತ್ಯತೆಯ ಹಾಡು

ಕವಿಯ ಒಲವಿನ ಗೂಡು

ಓದುಗನಿಗೊಂದು ಪ್ರಶ್ನೆಗಳ ಕಾಡು !!