ತವರು ಸಿರಿಗಿಂತ

ನಿಮ್ಮ ಮನ ಹಿರಿದೆನಗೆ

ನಿಮ್ಮ ಎದೆ ಆಸರೆಯು

ಕೊನೆಯವರೆಗೆ

 

ಹಣ್ಣುಂಟು ಹಾಲುಂಟು

ಜೇನುಂಟು ತವರಲ್ಲಿ

ನಿಮ್ಮ ಪ್ರೀತಿಗೆ

ಅದುವೆ ಸಮನು ಅಹುದೆ

ಅಮ್ಮನ ಆರೈಕೆ

ಇಹುದಿಂದು ತವರಲ್ಲಿ

ನಿಮ್ಮ ಕರದಾರೈಕೆ

ಕೊನೆಯವರೆಗೆ

 

ರೆಸಿಮೆಯ ಜರಿ ಸೀರೆ

ತೊಡಿಸಿಹರು ಎನಗಿಲ್ಲಿ

ನಿಮ್ಮ ಪ್ರೇಮದ ಧಾರೆ

ಎನಗೂ ಮಿಗಿಲು.

                  ಉಮೇಶ ಮುಂಡಳ್ಳಿ ಭಟ್ಕಳ ಉ.ಕ.