ರೈತನ ಆತ್ಮಹತ್ಯೆಗೆ 

ನೀಡಿದಿರಿ ಹತ್ತು ಲಕ್ಷ 

ಅವರೆಲ್ಲ ಜೊತೆಯಾಗಿ 

ಸರ್ಕಾರದ ಕೈ-ಕಾಲು ಹಿಡಿದು 

ಅಳುವಾಗ ಎಲ್ಲಿ ಹೋಗಿತ್ತೋ 

ನಿಮ್ಮ ಲಕ್ಷ್ಯ?

ಲಾಭಿಕೋರರ ವಂಚನೆಗೆ 

ಅನ್ನದಾತನ ಉಸಿರುಕಟ್ಟುತ್ತಿದೆ.... 

ದಯಮಾಡಿ ಕೊಡಮಾಡಿ ಪ್ರಾಣ ಭಿಕ್ಷ 

ಆಗ ಮಾತ್ರ ನಾಡು ಸುಭಿಕ್ಷ