ಅಲ್ಪತೃಪ್ತರು ನಾವು ಅಲ್ಪತೃಪ್ತರು 

ಅಲ್ಪತೃಪ್ತರು ನಾವು ಸ್ವಲ್ಪತೃಪ್ತರು

ತಿಂಗಳದರೆ ಏನೊ ಗಳಿಸಿ 

ಇದ್ದುದರಲ್ಲಿ ಏನೊ ಉಳಿಸಿ 

ಉಳಿಸಿದ್ದನು ಇನ್ನೆಲ್ಲೋ ಮುರಿಸಿ

ಹಾಸಿಗೆ ಇದ್ದಷ್ಟೇ ಕಾಲು ಚಾಚುವ 

ಅಲ್ಪತೃಪ್ತರು ನಾವು ಅಲ್ಪತೃಪ್ತರು 

ಅಲ್ಪತೃಪ್ತರು ನಾವು ಸ್ವಲ್ಪತೃಪ್ತರು

ಪ್ರೀತಿ ಸ್ನೇಹ ಮೊದಲ ಸ್ವತ್ತು 

ವಂಚನೆ ಮೋಸ ಯಾರಿಗೆ ಗೊತ್ತು 

ದುರಾಸೆ ಪಟ್ಟರೆ ಬರುವುದು ಕುತ್ತು 

ನ್ಯಾಯ ನೀತಿಯೇ ದೇವರು ಎನ್ನುವ

ಅಲ್ಪತೃಪ್ತರು ನಾವು ಅಲ್ಪತೃಪ್ತರು 

ಅಲ್ಪತೃಪ್ತರು ನಾವು ಸ್ವಲ್ಪತೃಪ್ತರು

ಭಾವನೆಗಳಿಗೆ ಬೆಲೆಯನು ಕೊಟ್ಟು 

ದೊಡ್ಡ ಕನಸನೆಲ್ಲ ದೇವರಿಗೆ ಬಿಟ್ಟು 

ಇಷ್ಟೇ ನಮ್ಮ ಜೀವನದ ಗುಟ್ಟು

ನೀವು ನಮ್ಹಂಗೆ ಬಾಳಿ ಎನ್ನುವ

ಅಲ್ಪತೃಪ್ತರು ನಾವು ಅಲ್ಪತೃಪ್ತರು 

ಅಲ್ಪತೃಪ್ತರು ನಾವು ಸ್ವಲ್ಪತೃಪ್ತರು