ಮತ್ತೆ ಬಂದಿದೆ ಹೊಸ ವರುಷ
ಹೊಸ ವರುಷ ಮತ್ತೆ ಬಂದಿದೆ
ಹರುಷದಿಂದ ಎಲ್ಲ ಕುನಿಯಲೆಂದಲ್ಲ
ಮೋಜು ಮಸ್ತಿಯಿಂದ ಎಲ್ಲ ಹಿಗ್ಗಲೆಂದಲ್ಲ
ಶುಭಾಶಯ ಹಾರೈಕೆಗಳ ಮಹಾನದಿ ಹರಿಯಲೆಂದಲ್ಲ
ಬಂದಿದೆ ಹೊಸ ವರುಷ ಹೊತ್ತು ಮತ್ತದೇ ಪ್ರಶ್ನೆ
ಮತ್ತೆ ಬಂದಿದೆ ಹೊಸ ವರುಷ
ಮೊದಲ ದಿನದಂದು ಮಂದಿರ ಚರ್ಚು
ಮಸೀದಿಗಳು ಕಿಕ್ಕಿರಿದು ತುಂಬಲೆಂದಲ್ಲ
ಕಟು ನಿರ್ಧಾರಗಳನ್ನು ಕೈಗೊಂಡು
ಎರಡೇ ದಿನದಲ್ಲಿ ಅದಕ್ಕೆ ಎಳ್ಳು ನೀರು ಬಿಡಲೆಂದಲ್ಲ
ರಾತ್ರಿಯಿಡಿ ಜಾಗರಣೆ ಮಾಡಿ
ಮೊದಲ ದಿನ ಪೂರ್ತಿ ಮಲಗಲೆಂದಲ್ಲ
ಬಂದಿದೆ ಹೊಸ ವರುಷ ಮತ್ತದೇ ಯಕ್ಷ ಪ್ರಶ್ನೆಯೊಂದಿಗೆ
ಏನದು ಪ್ರಶ್ನೆ?
ಕೇಳುತಿದೆ ಹೊಸ ವರುಷ ನಿನ್ನ ಕಳೆದ ವರ್ಷದ ಸಾದನೆಯನ್ನ
ನೀನು ಮುಟ್ಟಿದ ಗುರಿಗಳ್ಳನ್ನ, ಪ್ರೀತಿಯಿಂದ ತಟ್ಟಿದ ಮನಗಳ್ಳನ್ನ,
ನೀ ತೋರಿದ ಔದಾರ್ಯವನ್ನ ,ಚಾಚಿದ ಸಹಾಯಹಸ್ತವನ್ನ,
ಇದೆಯೇ ಇದಕ್ಕೆ ನಮ್ಮಲ್ಲಿ ಉತ್ತರ,
ಇಲ್ಲದ್ದಿದ್ದರೆನಾಯ್ತು, ಮತ್ತೆ ಬರುವುದು ಹೊಸ ವರುಷ
ಏನಾದರು ಸಾಧಿಸಿ ಕೊಟ್ಟರಾಯ್ತು ಆಗ ಉತ್ತರ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!