ಮನದ ಮಾತನು ಕಂಗಳೆಳುವ
ಮುನ್ನ ಕಂಬನಿ ಸುರಿದಿದೆ
ಪ್ರೇಮಗೀತೆಗೆ ರಾಗ ಮೀಟುವ
ಮುನ್ನ ತಂತಿಯು ಹರಿದಿದೆ
ಮೂರು ವರ್ಷದ ಮನದ ಹರ್ಷವು
ಅಗ್ನಿಸ್ಪರ್ಶಕೆ ಕರಗಿದೆ
ನಿನ್ನೆ ರಾತ್ರಿ ಕಂಡ ಕನಸು
ಇಂದು ಸಂಜೆಗೆ ಮುಗಿದಿದೆ
ನನ್ನ ಎದೆಗೆ ಇಂಬನಿಟ್ಟು
ನೀನು ನೆಟ್ಟ ಗುರಿ ತಲುಪಿದೆ
ನೀನು ಪ್ರೀತಿಯ ನೀರು ಎರೆಯದೆ
ಪ್ರೇಮ ಕುಸುಮವು ಬಾಡಿದೆ
ನನ್ನ ಪ್ರೀತಿಗೆ ನಿನ್ನ ರೀತಿಯು
ಮನಕೆ ನೋವನು ತಂದಿದೆ
ನಿನ್ನ ಮೌನ ನನ್ನ ಕವಿತೆ
ಎಲ್ಲ ಇಂದಿಗೆ ಮುಗಿದಿದೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!