ಮನಸು ಮಾತಾಯ್ತು ಮಾತು ಕವಿತೆಯಾಯ್ತು

ಆ ಕವಿತೆಗೆ ಸಿಕ್ಕ ರಾಗ ನೀನು ನನ್ನ ಸ್ನೇಹವೇ

ನನ್ನ ಕವಿತೆ ಪಲ್ಲವಿ ನೀನು

ಅದರ ಚರಣ ಮಾತ್ರ ನಾನು

ನನ್ನ ಬಿಟ್ಟು ದೂರ ಹೋಗಿ ಮಾಡದಿರು ನನ್ನನು

ಪಲ್ಲವಿ ಇಲ್ಲದ ಚರಣವ

ಕವಿತೆ ಪದಗಳು ಮಾತ್ರ ನಾನು

ಅದರ ಮೂಲ ಅರ್ಥ ನೀನು

ನನ್ನ ಬಿಟ್ಟು ದೂರಹೋಗಿ ಮಾಡದಿರು ನನ್ನನು

ಅರ್ಥ ವಿಲ್ಲದ ಪದವನು

ಕವಿತೆ ಬರೆಯೋ ಕವಿಯು ನಾನು

ಅದರ ಮೂಲ ಅರ್ಥ ನೀನು

ನನ್ನ ಬಿಟ್ಟು ದೂರಹೋಗಿ ಮಾಡದಿರು ನನ್ನನು

ಸ್ಪೂರ್ತಿ ಇಲ್ಲದ ಕವಿಯನು