ನಲಿವಿನ ಕ್ಷಣಗಳು ಬಂದರೆ
ಮನದೊಳು ಆನಂದವು
ನೋವಿನಾ ದಿನಗಳೆಂದರೆ
ಅದೆಂಥ ದುಃಖವು,
ಈ ಬದುಕೇ ಹೀಗೆ
ಹಳಿಗಳ ಮೇಲಣ ಪಯಣದಂತೆ
ನೋವು..ನಲಿವುಗಳು ಜೊತೆಯಲ್ಲೇ,
ಸಮಾನಾಂತರವಾಗಿ
ತಿರುವಿನಲ್ಲೊಮ್ಮೆ ಬೆಳಕಾದರೆ
ಕೆಲವೊಮ್ಮೆ ಭಯಂಕರ ಕಾರ್ಗತ್ತಲು,
ಪ್ರಖರತೆಯಲ್ಲೇ ಪಯಣವಿದ್ದಾಗ
ಹಿರಿಹಿರಿ ಹಿಗ್ಗು ಬೇಡ
ಅಂಧಕಾರದ ನಡುವೆ ದಾರಿ ಸಿಗದಿರೆ
ಬೇಸರಿಸುವುದೂ ಬೇಡ,
ಏಳುವುದು ಧೈರ್ಯದಿಂದ
ನಡೆಯಬೇಕಿದೆ ಎಮಗೆ,
ಮತ್ತೆ ಮುನ್ನಡೆಯಲ್ಲಿ
ದಾರಿಯುಂಟು ಕ್ರಮಿಸಲು
ಮಾರ್ಗದರ್ಶಿಗಳಂತೆ ಬರುವರು
ಮಿತ್ರರು..ನಿಜಮಿತ್ರರು
ಒಂದಿಷ್ಟು ಸಂತೈಸಲು,
ಸುಖ ದುಃಖಗಳೆಂಬ ಹಳಿಗಳೇ
ಜೀವನ ರೈಲಿಗೆ ಆಧಾರ
ಅವುಗಳ ಮೇಲೆ ಪಯಣ
ಅನಿವಾರ್ಯ...ನಿರಂತರ,
ಎಲ್ಲವೂ ಜೊತೆಜೊತೆಯಾಗಿ
ಅಳುವಿನ ಅರಿವು ಎಮಗಿರಬೇಕು
ಕಣ್ಣೀರ ಹನಿ ಕಾಣುವಂತಿರಬಾರದು
ನಗಬೇಕು....ನಕ್ಕಂತಿರಬೇಕು
ನಮ್ಮ ನಾವೇ ಸಂತೈಸಿಕೊಳ್ಳಬೇಕು.
(ಚಿತ್ರ ಕೃಪೆ_ ಗೂಗಲ್ ಇಮೇಜನಿಂದ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!