ಹೊಯ್ಸಳ ಶಿಲ್ಪಕಲಾ ವೈಭವ

    ಕರುನಾಡ ಶಿಲ್ಪಕಲೆ ಉತ್ಸುಂಗ ಮೆನಿಸಿರ್ಪ

    ಹೊಯ್ಸಳರ ಶಿಲ್ಪಕಲೆ ಅಚ್ಚರಿಯನು

    ನೂರಾರು ಪಾಳುಗುಡಿ ಕೋಟೆ ಕೊತ್ತಲ

    ಮತ್ತೆ ಶಾಸನದ ಉಕ್ತಿಗಳು ಹೇಳುತಿಹವು

    ಗತಸಿದ್ವೈಭವ ಮತ್ತು ಇತಿಹಾಸ ಕುರುಹುಗಳು

    ಕ್ಷೀಣ ಸ್ವರದಲಿ ತಾವು ಚೀರುತಿಹವು

        

            ತಮ್ಮ ನಿಮರ್ಿಸಿದೆಲ್ಲ ಅರಸರಳಿದರು ಇನ್ನೂ

            ಉಳಿದಿಹರು ಅಪ್ರತಿಮ ಕೃತಿಗಳಲ್ಲಿ

            ನೆಲನಾಳ್ದನೃಪರುಗಳು ಗಳಿಸಿದೊಡವೆ ವಸ್ತು

            ವಾಹನಂಗಳು ಒಂದೂ ಇಲ್ಲವಾಗಿ

            ಮಂದಿ ಮಾರ್ಬಲಸೇನೆ ಕಾಲಾಳು ಮರೆಯಾಗಿ

            ಕಲೆಯೊಂದೇ ಉಳಿದಿಹುದು ಸತ್ಯವಾಗಿ

    ತಮ್ಮ ಬದುಕಿನ ಎಲ್ಲ ಗಳಿಕೆ ಉಳಿಕೆ ಬಳಸಿ

    ನಿಮರ್ಿಸಿಹರಪ್ರತಿಮ ಸಂಪತ್ತನು

    ಆವಕಾಲಕು ಅರಿಯಲಾಗದಿಹ ಕ್ಷಿಷ್ಟತೆಯ

    ಉತ್ಕ್ರುಷ್ಟ ಕೃತಿ ಇತ್ತು ಹೋಗಿರುವರು

    ಚಕ್ರವತರ್ಿಗಳಿಷ್ಟ ಮತ್ತು ನಿಷ್ಟೆಗೆ ಸೋತು

    ಶಿಲ್ಪಿ ಕುಲ ನಿಮರ್ಿಸಿಹುದೀ ಶಿಲ್ಪ ಸಂಪತ್ತನು

            ಅಡವಿಯೊಳಗಡಗಿದ್ದ ಗುಡ್ಡದಂತಹ ಕಲ್ಲು

            ಶಿಲ್ಪಿ ಚತುರರ ಕೈಲಿ ಹೂವಾಯಿತು

            ಅವಿರತದ ದುಡಿಮೆಯೊಳು ಮೂಡಿಬಂದಿಹುದೀ

            ದೇವಶಿಲ್ಪ ಗುಡಿಯ ಕಾಯಕಲ್ಪ

            ಒಡೆಯರಣತಿಗೆ ನಾಡೆ ದುಡಿದಿದೆ ಹಗಲು

            ಇರುಳಿನ ಪರಿವೆ ಇಲ್ಲದೆ ನಾಡಿನಾ ಜನ ದಣಿದಿದೆ

    ಪ್ರಜೆಗಳು ಪರಿವಾರವು ಮಿತ್ರರು ಸಾಮಂತರು

    ಕಲೆಯ ಅರಿವಿರುವೆಲ್ಲರು ಕೈದಿ ಕಾಮರ್ಿಕರೆಲ್ಲರು

ಪ್ರಾಣ ಒತ್ತೆಯನಿಟ್ಟು ಶ್ರಮಿಸಿಹರಿಂತಹ ಗುಡಿ

ಗೋಪುರವ ಕಟ್ಟಿ ಪ್ರಭುವ ಮೆಚ್ಚಿಸಲು

ದೇಶ ಭೀಕರ ಕ್ಷಾಮ ಡಾಮರ ರೋಗರುಜಿನಗಳೆಲ್ಲ

ದೆಡೆಯೊಳು ನೃಪರು ನಡೆಸಿಹರಿಂತಹ ಕಾರ್ಯಸಾಧನೆಯ     

        ತಮ್ಮ ಕಾಲದ ಆಳ್ವಿಕೆಯ ಹೆಗ್ಗುರುತ ಇಳೆಯೊಳು

        ಇರಿಸಿತೋರುವ ಆಸೆಯಿಂ ಭ್ರಮಿಸಿ

        ನಡೆಸಿಯುದ್ದವ ನೆಲ್ಲ ದಿಕ್ಕಿಗೂ ಹೊತ್ತು

        ತಂದರು ಹೊನ್ನರಾಶಿಯ ಬಳಸಿದರು ಅದನೆಲ್ಲ

             ತಾವು ನಿಮರ್ಿಪ ಗುಡಿಯ ಸಲುವಾಗಿ

        ಮತ್ತು ಧರ್ಮದ ಐಕ್ಯತೆಯ ಕುರುಹಾಗಿ

 

ನಡೆಸಿದರು ಕಾರ್ಯಂಗಳಲ್ಲವ ನಾಡ

ಜನತೆಗೆ ಶಾಂತಿ ಕೋರುವ ಹಿತದ ಸಲುವಾಗಿ 

ಕೆಲಸ ಕಾರ್ಯಗಳಿಲ್ಲದಲೆಯುವ ದಂಡ

ಪಿಂಡಗಳ ಹಿಂಡನೆಲ್ಲವ ಹೆಡೆಮುಡಿಗಟ್ಟಿ ಹಿಡಿತರಿಸಿ

ಹಾಳು ಹರಟೆ ಪುರಾಣ ಕೊಚ್ಚುವ ಹೆಂಡ

ಭಂಗಿಗಳುಂಡೆ ದಾಸರ ಬಡಿದು ಎಳೆತರಿಸಿ

        ಹಿಡಿದು ದುಡಿಸಿದ ರವರ ನಿಂತಹ

        ಕಾರ್ಯ ಸಾಧನೆಯ ಸಲುವಾಗಿ

        ದೇಶ ದೇಶಗಳಲೆೆಸಿ ಚತುರ ಮತಿ ಚಾಣಕ್ಷ

        ರಾಗಿಹ ಶಿಲ್ಪ ಕಲಾ ಕೋವಿದರ ಕರೆತರಿಸಿ

        ಯೋಗ್ಯತೆಗೆ ಅನುಸಾರ ಸ್ಥಾನ ಮಾನಗಳಿತ್ತು

        ನೆರೆವು ಪಡೆದಿಹರು ಇಂತಹ ಹಲವು ಪಡೆಗಳಲಿ

ಕಗ್ಗಲ್ಲಿನಂತಲ್ಲ ಈ ಕಲ್ಲು ಭುವಿಯಲ್ಲಿ ಎಲ್ಲು

ಬೇಕೆಂದಲ್ಲಿ ದೊರೆವುದಿಲ್ಲಾ

ಪರಿಣಿತರ ಪಡೆಹಚ್ಚಿ ಹುಡುಕಿ ಈ ಕೃಷ್ಣಶಿಲೆ

ದೊಡ್ಡಗಾತ್ರದಿ ಮತ್ತೆ ಸಿಗುವುದಿಲ್ಲಾ

ನಾಡೊಳುಲವತ್ತು ಕಡೆ ದೊರೆತಂಥ ಈ ಕಲ್ಲ

ದೂರತಲ್ಲ್ಲೆ ಸಮಗೈದು ತಂದರಲ್ಲ

        ಹಲವು ಚಕ್ರಗಳಿರುವ ತೇರುಗಾಡಿಯ ಮೇಲೆ

        ಬಲು ಶ್ರಮಿಸಿ ಶಿಲೆಯನ್ನು ಮೇಲಿರಿಸಿ

        ಆನೆ ಕುದುರೆಯ ಕಟ್ಟಿ ದಾರಿಯನು ಸಮಗಟ್ಟಿ

        ಎಷ್ಟೋ ದಿನಗಳ ಕಾಲ ತಂದರೆಲ್ಲಾ

        ನಾಡನೊಳಗಿರು ವೆತ್ತು ಕತ್ತೆ ಕುದುರೆಗಳಗಳೊಡನೆ

        ಮಂದಿ ಮಾರ್ಭಲ ಸೇನೆ ದುಡಿಯಿತಲ್ಲಾ

ಮನುಕುಲದ ಶಕ್ತಿಯನು ಶ್ರಮಿಕ ಸಂಪತ್ತನ್ನು 

ಸದ್ಬಳಸಿ ಗುಡಿ ಕಾರ್ಯ ಗೈದರಲ್ಲಾ

ಸ್ತ್ರೀ ಶಕ್ತಿ ಸಂಪತ್ತು ಅನ್ನ ಪೂಣರ್ೆಯರಂತೆ

ಪ್ರೀತಿಯಲಿ ತುತ್ತಿಟ್ಟು ಪೊರೆದರಲ್ಲಾ

ನಾಡಲ್ಹುಟ್ಟಿದ್ಹೆಣ್ಣು ಗಂಡು ದೇಶದ ಸಂಪತ್ತು ಎಂದು

ತಿಳಿದು ನೃಪರು ನಡೆಯಲಾಗಿ ಗುಡಿಯು ಮೂಡಿತು

        ದಕ್ಷಿಣಾಚಾರದ ಶಿಲ್ಪಕಲಾ ಪ್ರಾಚಾರ್ಯ

        ಜಕ್ಕಣರ ಸ್ಥಾಪತ್ಯದಧಿಪತ್ಯದೀ

        ದಾಸೋಜ ಮಲ್ಲೋಜ ಮತ್ತ್ತೆ ಮಲ್ಲೀತಮ್ಮ 

        ಚಾವ್ಹಣರೆ ಮುಂತಾದ ಮಹನೀಯರು 

        ಹಲವು ಸಾಸಿರ ಸಂಖ್ಯೆ ಶಿಲ್ಪಕಲಾ ಚತುರರಿಗೆ

        ಮುಖಂಡರಾಗುತ ಪ್ರಕಾಂಡ ಪಾಂಡಿತ್ಯ ಮೆರದಿಹರು

 

 

ಪ್ರಮುಖ ಶಿಲ್ಪಿಯ ಮನದ ಇಂಗಿತ ಅರಿತುನಡೆ

ದಂಡೇ ನೆರೆದಿತ್ತಲ್ಲಿ ಶಿಷ್ಯ ಕೋಟಿ

ಪೂವರ್ಾಚಾರದ ಶಿಲ್ಪ ಪ್ರಕಾರದಿ ಗಂಗ ಕದಂಬ

ಚೋಳ ಚಾಲುಕ್ಯ ರಾಷ್ಟ್ರಕೂಟ ಮೊದಲಾದವರು

ಪೆಡೆಸು ಕಲ್ಲಿನಲ್ಲಿ ಅಪ್ರತ ಮೆನಿಸುವ ಗುಡಿಗೋಪುರಗಳ

ನಿಮರ್ಾತೃಗಳವರಾಗಿಹರು ದೃವತಾರೆಗಳಾಗಿ ಮೆರೆದಿಹರು

        ವಿಜಯ ನಗರದ ಅರಸು ಕುಲಗಳು ಸಾಮಂತ

        ಪಾಳೆಯಗಾರರು  ಬಹುಮನಿಯ ಸುಲ್ತಾನರು 

        ಶಿಲ್ಪಕಲೆಗಪ್ರತಿಮ ಕೊಡುಗೆಯ ನೀಡುತ

        ವೈವಿದ್ಯತೆಯನು ತಾವ್ ತೋರಿಹರು

        ನಾಡಿನ ಶಿಲ್ಪಕೆ ಉತ್ತಮ ಕೊಡುಗೆಯ ಇತ್ತಿತಿಹಾಸದಿ 

        ಅಮರರಾಗಿ ತಾವ್ ಉಳಿದಿಹರು

ಹೊಯ್ಸಳ ಶೈಲಿಯೊಳ ಪ್ರತಮೆನಿಸುವ 

ದಕ್ಷಿಣಾಚಾರದ ಶಿಲ್ಪಪ್ರಕಾರದಿ ಆದ್ಯ

ಪ್ರವರ್ತಕರಾಗುತ ನಾಡೊಳು ಮೆತು ಕಲ್ಲಿನ 

ಅತಿ ಸೂಕ್ಷ್ಮಾತಿಸೂಕ್ಷ್ಮದ ಕಾರ್ಯದಿ ಖ್ಯಾತಿಯ ನೆತ್ತಿಹರು

ಸ್ವರ್ಣ ಸಂಪುಟದ ತೆರದಲಿ ತೋರುವ 

ಸಾಸಿರ ಗುಡಿಗಳ ಕಟ್ಟಿಹರು ಲೋಕವಿಖ್ಯಾತರು ಆಗಿಹರು

        ಹೊಯ್ಸಳ ಶೈಲಿಯ ಸಾಸಿರ ಗುಡಿಗಳು

        ನೋಡಲು ಒಂದೇ ತೆರ ಎಂದೆನಿಸುವವು

        ಒಂದು ಗುಡಿಯಲಿರುವ ಕಂಬ ಬೇಲುಬಳ್ಳಿ

        ಪ್ರಾಣಿಸಾಲು ಹಕ್ಕಿ ಪಕ್ಷಿ ಚಿತ್ರಸಾಲು

        ಒಂದಂರಂತೆ ಒಂದು ಇರದೆ ನಕ್ಷತ್ರದ ಅದಿಯ ಮೇಲೆ

        ಸಾವಿರಾರು ಏಣುಮೂಲೆ ವಿಸ್ಮತೆಯಲಿ ಮೂಡಿವೆ

ಉಬ್ಬು ತಗ್ಗು ಏರು ಇಳಿವು ಆಳವಾದ ಉಳಿಯ ಹೊಳಹು

ಪಾದದಿಂದ ತುದಿಯವರೆಗೂ ಏಣುಮೂಲೆ

ಏಕನಡೆಗೆ ಎಲ್ಲಿಯೂ ತಾ ತಪ್ಪದಂತೆ

ಜ್ಯಾಮಿತಿಗಳ ಕೋನದಳತೆ ಎಲ್ಲು ತಪ್ಪಿ ಹೊರಳದಂತೆ

ಕಾಯ್ದುಕೊಂಡ ಕಲ್ಲ ತುಂಡು ಜೋಡಣೆಗಳ ಮಾಡಿಕೊಂಡು

ಸಾವಿರಾರು ದಳಗಳಿರುವ ಪದ್ಮಪುಷ್ಪದಂತೆ ತೋರ್ವ

        ನೋಡಿ ಅರಿವುದತ್ತ ಇರಲಿ ಕಂಡಕಣ್ಣೆ ಸೋತುಸೊರಗಿ

        ಮಾತಮರೆಸಿ ಮೂಕ ಮಾಡ್ವ ಕಲ್ಪನೆಗೂ ಅತೀತವಾದ 

        ಚವರ್ಿತ ಚವರ್ಣವಾದ ಅತೀತವಾದ ಅದ್ಬುತಗಳ 

        ವಿಸ್ಮಯಗಳ ಲೋಕದೆದುರು ಅರಿವೆವೆನುವರೆದೆಯೆ ಬಿರಿದು

        ಭಯದೊಳವರ ದೂಡಿಬಿಡುವ ಕಲೆಯಮೋಡಿ ಮಾಡಿಬಿಡುವ

        ಸೌಂದರ್ಯದ ಬೀಡಿದು ಅತ್ಯದ್ಬುತ ಗುಡಿಇದು

ಒಟ್ಟಂದದಿ ಎಲ್ಲಗುಡಿಗಳೊಂದೆ ಕೈಯೊಳಾದತೆರದಿ 

ತೋರುವ ವಿಶೇಷವು ಶಿಲ್ಪ ಕಲೆಯ ಕೋಶವು

ಚತುರ ಸ್ವರ್ಣ ಶಿಲ್ಪಿಯೋರ್ವ ರತ್ನಕಚಿತ ಕರಂಡಕವ 

ಮುನಿದ ನಲ್ಲೆ ಮನವ ಗೆಲ್ಲೆ ಚಾತುರ್ಯದಿ ರಚಿಸಿ ಅದನು

ವಿಸ್ಮಯದಲಿ ನೋಡುವಂತೆ ತೋರುತಿರುವ ಗುಡಿಇದು

ರಸಿಕರೆದೆಯು ವಿಕಸ ಗೊಳ್ವ ಕಲೆಯ ಕಲ್ಪತರುವಿದು

        ದೇವಲೋಕದೆಲ್ಲ ಹಿಂಡು ಹೊತ್ತು ಹೊಯ್ಯಲೆಂದು ಬಂದು

        ಮೂಕರಾಗಿ ಮೂತರ್ಿಯಾದ ತೆರದಿ ಇದುವೆ ತೋರ್ಪದು

        ಕಾರಣವಿದಕ್ಕೆಲ್ಲ ಶಿಲ್ಪಿ ಸಮೂಹವೇ ಶಿಸ್ತಿನಿಂದ 

        ಸ್ಥಪತಿ ಶ್ರೇಷ್ಟರಾದೇಶವ ಶಿರದಿ ಹೊತ್ತು

        ವಿನಯ ವಿವೇಕದಿಂದ ಅನ್ಯಮಾರ್ಗ ಕೆಳಸದಂತೆ 

        ಗೈದ ಶಿಲ್ಪತಪವಿದು ತಪದಿ ಪಡೆದ ಫಲವಿದು

ಆಯ ಆಳತೆ ತಾಲಮಾನ ದೊಳಗೆ ಎಲ್ಲೂ ರಾಜಿ ಇರದೆ

ದುಡಿದು ದಣಿದು ಕಡೆದುದಲ್ಲ ಕಲೆಯ ಕಡಲಿನೊಡಲಿದು

ಒಂದೆ ಕೈಯ್ಯ ತೆರದೊಳಲ್ಲಿ ಕಲೆಯ ಕುಸುರಿ ಕೆಲಸದಲ್ಲಿ

ಕುಸುರಿಗೆ ಬಿಸಿ ಉಸುರನಿಲ್ಲಿ ಉಸುರಿ ಉಸುರ ನೀಡಿತಾವು

ಮಕ್ಕಳು ಮನೆಮಡದಿಯರನು ಮರೆತು ಗೈದ ತಪವಿದು 

ಭೋಗ ಭಾಗ್ಯ ತ್ಯಾಗಗೈದು ಕಡೆದ ಕಲ್ಲು ಗುಡಿಇದು

         ದೇವ ಧೈತ್ಯಯಕ್ಷರೆಲ್ಲ ಪ್ರಾಣಿಪಕ್ಷಿಲೋಕವೆಲ್ಲ

        ಲಕ್ಷ ಲಕ್ಷ ಸಂಖ್ಯೆಯಲ್ಲಿ ಇಲ್ಲಿಮೂಡಿ ಬಂದಿತೊ

        ಅಣುವಿನಂತ ಶಿಲೆಯ ಒಳಗೂ ಸೂಕ್ಷ್ಮದಿ

            ಅತಿ ಸೂಕ್ಷ್ಮ ಕಲೆಯ ಕೊರೆದ ಶಿಲ್ಪಿಮಾನ್ಯರೊ

            ಬೇಲು ಬಳ್ಳಿ ಕುಸುರುಗಳಲಿ ಕುಸುರಿನೆಸಳು ಚಿಗುರಿನಲ್ಲಿ

            ಕಂಬದೇಣು ಮೂಲೆಗಳಲಿ ಕಡತವಿಡಿದು ಸ್ಥಂಭ ಮಾಡಿ

    ಮಿರಮಿರಮಿರ ಮಿಂಚುವಂತೆ ತರುಣಿ ಮೈಯ ನುಣ್ಪಿನಂತೆ 

    ಒಂದರಂತೆ ಒಂದು ಇರದೆ ನೋಡಲೊಂದೆ ಎನಿಸುವಂತೆ

    ಭ್ರಮೆಯಗೊಳಿಪ ಶಿಲ್ಪವೊ ಕಲ್ಪನಾ ವಿಲಾಸವೋ

    ದೇವಲೋಕದೆಲ್ಲರಿಲ್ಲಿ ನೆಂಟರಂತೆ ಉಣಲು ಬಂದು

    ಮರಳುವುದನೆ ಮರೆತು ಇಲ್ಲೆ ಸ್ಥಿರದಿ ತಾವು ನಿಂತರೊ

    ನಿಂತ ತಪ್ಪಿಗಿಲ್ಲೆ ಅವರು ಕಲ್ಲು ಬೊಂಬೆ ಯಾದರೊ

            ಎನಿಸುವಂತ ಭಾವಭಂಗಿ ರೂಪು ಚೆಲುವು ಲಾವಣ್ಯ 

            ಕಡೆದ ಶಿಲ್ಪಿ ಮಾನ್ಯರೊ ಕಂಡ ಜನರು ದನ್ಯರೊ

            ದೇವಲೋಕದ್ಹೆಣ್ಣುಗಳಿಗೆ ಎದಿರು ಸ್ಪದರ್ೆ ನೀಡುವಂತೆ

            ನಾಡಿನ ಸುಂದರಿಯರೆಲ್ಲ ಇಲ್ಲಿ ಬಂದು ನೆರೆದರೊ

            ಇವರು ಹುಡುಕುತವರ ಗಂಡು ಜಾತಿಯಲ್ಲ ದಂಡನಿಕ್ಕಿ

            ಚತುರ ಶಿಲ್ಪಿ ಎದುರು ನಿಂತು ಮೂತರ್ಿ ರೂಪ ಪಡೆದರೊ

 

 

ಅಂತೆ ಇವುಗಳೆಲ್ಲರಲ್ಲಿ ಒಸರುವಂತ ಜೀವದ ರಸ

ವಸ್ತ್ರ ಒಡವೆ ವೈವಿಧ್ಯತೆ ಚಲುವು ಇಲ್ಲಿ ಅಚಲವಾಗಿ 

ಮದನಿಕೆರೆಯರ ನಾಟ್ಯದಲ್ಲಿ ಮೋಹಕ ಮೈಮಾಟದಲ್ಲಿ 

ಚೆಲುವು ಚೆಲ್ವ ಲಾಸ್ಯದಲ್ಲಿ ಲೋಕವೆ ಮೈ ಮೆರವುದು 

ಚತುರ ಶಿಲ್ಪಿ ಚಿಗುರು ಬೆರಳ ಉಳಿಯ ಮೊನೆಯೊಳ್ಹುಟ್ಟಿ ಬಂದ

ಸೃಷ್ಟಿಕರ್ತನೆದುರಿನಲ್ಲಿ ಮರುಸೃಷ್ಟಿಯ ಮಾಡಿದಂತ ಅಪರವಿಶ್ವಕರ್ಮರೊ

            ಪುರಾಣಗಳ ಪುಣ್ಯಕಥೆಯು ಸಾಲುಗಟ್ಟಿ ನಿಂತು ಇಲ್ಲಿ

            ಸ್ಥಾವರ ವಾಗಿರುವುದು ಇಂದು ನಾವು ಕಾಣುವಂತ

            ವಸ್ತ್ರಕೇಶ ವೈವಿದೈತೆ ಹಿಂದೆ ಮೊದಲು ಇದ್ದಿತೆಂಬ

            ಶಿಲ್ಪವಿಲ್ಲಿ ಕಾಂಬದು ಭುವಿಯೊಳಲ್ಲು ಇಲ್ಲದಂತ

            ಪೌರಾಣಿಕ ಪ್ರಾಣಿ ಪಕ್ಷಿ ಜೀವ ಜಂತು ರಾಶಿ ರಾಶಿ

            ಕಲ್ಪನಾವಿಲೋಕದಲ್ಲಿ ರಾರಾಜಿಸುತಿಪರ್ುದು

ಶಿಲ್ಪ ಶಾಸ್ರ್ತದೆಲ್ಲ ಸಾರ ಸತ್ವಂಗಳು ಮೇಳೈಸುತ

ಅಳತೆ ಆಯ ತಾಲಮಾನ ನಾಟ್ಯಶಾಸ್ರ್ತ ಭಾವಭಂಗಿ 

ಶರೀರಗಳ ಸಪ್ರಮಾಣ ಸುಪುಷ್ಟತೆಯ ಅವಯವಗಳು 

ಲಾಲಿತ್ಯದ ವೈವಿಧ್ಯತೆ ಸೂರೈಗೈವ ಶಿಲ್ಪಗಳು

ಸಕಲ ಶಾಸ್ರ್ತ ಸಾರವರಿತು ಕೃತಿಯಲದನು ಮೂಡಿಸಿರುವ 

ಪಂಡಿತ ಪ್ರಬ್ರುತಿಗಳೊ ರಸರುಷಿ ವರೇಣ್ಯರೊ

            ಎಲ್ಲೋ ಇದ್ದ ಕಾಡುಗಲ್ಲು  ಶಿಲ್ಪಿಯ ಕರ ಸ್ಪರ್ಷದಿಂದ

            ದಿವ್ಯ ದೇವ ಮೂತರ್ಿಯಾಗಿ ನಿತ್ಯ ಪೂಜೆಗೊಳುವುದು

            ಪೂಜೆಗೈಯುವೆೆನಿತೊ ಜನರ ಮೂತರ್ಿ ತಾನು ಪೊರೆವುದು

            ಶಿಲ್ಪಿ ಕಡೆದ ಮೂತರ್ಿಗಳನು ದೇವರೆಂದು ಒಳಗೆ ಇಟ್ಟು 

            ರೂಪವಿತ್ತು ಜೀವತೆತ್ತ ಮಹನೀಯರನು ಮರೆತು ಬಿಟ್ಟು

            ನಡೆವ ಪರಿ ಅದೆಂಥದು? ಎಂಥ ಶಾಸ್ತ್ರ ಧರ್ಮವು

ಮೂಗು ಕೊಟ್ಟ ಮಹಿಮರನ್ನು ಬೇಗದಲ್ಲಿ ಮರೆತು ಬಿಟ್ಟು

ಮೂಗು ಬೊಟ್ಟ ಹೊಗಳುವಂತ ಇತಿಹಾಸವದೆಂತದು?

ಭಾರತೀಯ ಶಿಲ್ಪಕಲಾ ಚತುರರ ಇತಿಹಾಸದಲ್ಲಿ

ಶಿಲ್ಪಿಯ ಸೊಲ್ಲೆಲ್ಲಿದೆ ಅವರ ಶ್ರಮವ ಸ್ಮರಿಸಿದೆ?

ಭರತ ಭೂಮಿ ಸ್ವರ್ಣ ಭೂಮಿ ಆಗುವಲ್ಲಿ ಶಿಲ್ಪಿಯಗ್ರ ಪಾಲಿದೆ

            ಇವರ ಮರೆತ ಇತಿಹಾಸವು ಎಲ್ಲಿ ಸತ್ಯವಾಗಿದೆ

            ಅರ್ದಸತ್ಯವಾಗಿದೆ ರೋಗಗ್ರಸ್ಥವಾಗಿದೆ.

                  _ _ _ _ _ _ _ _ _ _ _ _ _ _ _ _

ರಚನೆ : ಎಸ್.ಪಿ. ಜಯಣ್ಣಾಚಾರ್ ಶಿಲ್ಪಿ

    ಕನರ್ಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು

      'ಕಲಾಕುಟೀರ' ನಾರಯಣಪುರ ಎರಡನೇ ತಿರುವು

       ಚಿಕ್ಕಮಗಳೂರು -577101

ಮೊಬೈಲ್ : 9343553494