ಅಜ್ಞಾತ ಶಿಲ್ಪಿ ಸಾಧಕರು

ಕನ್ನಡದ ನಾಡು ನುಡಿ ನೀರು ನೆಲಗಳಿಗಾಗಿ 

ದುಡಿದು ಮಡಿದೆನಿತೊ ಮಹನಿಯರ ಸಾಲಿನಲಿ 

ಕರುನಾಡ ಶಿಲ್ಪಕಲಾ ಸಾಮ್ರಾಜ್ಯ ಸೌರಭವ 

ಮುಗಿಲಿನೆತ್ತರ ಒಯ್ದು ದಿಗ್ದಿಗಂತದಿ ಹರಡಿ 

ನೆಲವನಾಳಿದ ನೃಪರ ಚಿರಕಾಲ ಸ್ಮರಿಸುತಿಹ

ಸ್ಮಾರಕಗಳೆಮಗಿತ್ತು ತೆೆರೆಮರೆಗೆ ಸರಿದಿರುವ 

ಶಿಲ್ಪಕಲಾಕೋವಿದರ ಕೊಡುಗೆೆ ಇತಿಹಾಸವು ಮರೆವುದಲ್ಲ್ಲ.

    

ಕವಿಸಾರ್ವಭೌಮರಿಗೂ ಪ್ರತಿಸ್ಪದರ್ೆ ನೀಡುವ

ಪ್ರತಿಭೆ ಇದ್ದಿವರುಗಳು ಇತಿಹಾಸದಲಿ ಮೆರೆಯಲಿಲ್ಲ್ಲ 

ವಿಣಾವಾದನದೆದುರು ವೇಣುವಾದನವೆಂದೂ 

ಮಿಗಿಲಿದ್ದರೂ ತಾನೂ ಎದ್ದು ತೋರದಲ್ಲ 

ಇತಿಹಾಸ ಶಾಸನದಿ ತ್ಯಾಗ ಬಲಿದಾನವನು 

ಗೈದ ಮಹಿಮರ ಹೆಸರು ಇತಿಹಾಸದಲಿ ಸೇರಲಿಲ್ಲ 

ಶಿಲ್ಪಕಲಾ ಚಾತುರ್ಯ ಚತುರತೆಯ ಮೈವತ್ತ 

ಹೊಯ್ಸಳರ ಶಿಲ್ಪಕಲಾ ಸಾಮ್ರಾಜ್ಯ ಸರಸ್ವತಿಯ 

ಸೊಬಗಿನೊಳಗಿವರುಗಳು ಮುಚ್ಚಿಹೊದರಲ್ಲ 

ಕಥೆ ಕವನ ಕಾವ್ಯಗಳ ಬರೆದ ಮಹನಿಯರೆಲ್ಲ 

ಚಲುವಿನ ಹೊಗಿಳಿಕವಿನಃ ಶಿಲ್ಪ್ಪಿಗಳ ಶ್ರಮವನ್ನು 

ತಮ್ಮ ರಚನೆಯಳೆಲ್ಲು ಸ್ಮರಿಸಲಿಲ್ಲ 

ಪರಮಾರ್ಥ ಸಾಧನೆಯೇ ಪರಮೋಚ್ಚ ಗುರಿ ಎಂದು 

ಇಹದಾಸೆಬದಿಗೊತ್ತಿ ಪರದಾಸೆ ಬೆನ್ನತ್ತಿ

ಪರಮವೈರಾಗ್ಯದ ತವನಿದಿಗಳೆಂಬಂತೆ

ಕಡೆದ ಗುಡಿಗಳಲೆಲ್ಲೂ ಹೆಸರುಗಳ ಮೂಡಿಸದೆ

ಕಲೆಯ ಆರಾಧನೆಯೇ ಮೋಕ್ಷ ಸಾಧನೆ ಎಂದು

ಮಡಿದವರ ಹೆಸರುಗಳ ಶೋಧಕರು ಹುಡಿಕಿದರೆ ಸಿಗುವುದೆಲ್ಲಿ ?

ಇಲ್ಲದಿಹ ಹೆಸರುಗಳು ಎಲ್ಲಿಂದ ಬಂದಾವು

ಅಂದಿದ್ದ ಇತಿಹಾಸ ಶಾಸನವ ಬರೆದವರು

ಮುಂದಿನಿತಿಹಾಸಕ್ಕೆ ಬೇಕೆಂಬ ಅರಿವಿರದೆ ಮರೆತರಲ್ಲ

ಹೆಸರ ಬರೆಸದೆ ಇರುವ ವೈರಾಗ್ಯವೇನಿತ್ತೋ ಶಿವನೇಬಲ್ಲ

ಆದ್ಯ ಶಿಲ್ಪಿಯ ಮನದ ನೋವದುವೆ ಏನಿತ್ತೊ

ಅರಿಯದೀ ಇತಿಹಾಸ ಶಾಸನಗಳು ಬರೆಯಲಿಲ್ಲ

ಇಂದು ಸಂಶೋಧಕರು ಕೇಳುತಿಹ ಪ್ರಶ್ನೆಗೆ

ಯಾವ ಸಾಕ್ಷಿಯ ತೋರಿ ಉತ್ತರಿಸಲಿ

ಜಗದೆದುರು ಅವರಿತ್ತ ಅತಿಮೌಲ್ಯ ಕೊಡುಗೆಗೆ

ಅವರಿಲ್ಲವೆನ್ನುವ ಉಡುಗೊರೆಯ ನೀವಿತ್ತು 

ತಪಗೈದ ತಾಪಸಿಗೆ ತಾಪವಿಕ್ಕದಿರಿ

ಆಚಾರ್ಯ ಜಕ್ಕಣರ ಅಭಿಮಾನಿ ಬಳಗಕ್ಕೆ ನೋವನಿಕ್ಕದಿರಿ

ಜಗವನಾಳಿದೆನಿತೊನೃಪರು ಕಾಲಚಕ್ರದಡಿಗೆ ಸಿಕ್ಕು 

ನುಚ್ಚು ನೂರು ಆಗಿ ಕೊನೆಗೆ ಮರೆಯೆ ಆದರು

ತಮ್ಮ ಕಾಲದೆಲ್ಲಗಳಿಕೆ ಉಳಿಕೆಯೊಡನೆ ಹೊನ್ನ ರಾಶಿ

ಭಂಡಾರವ ಲೂಟಿಗೈದು ಯಾರೊ ಹೊತ್ತು ಹೊಯ್ದರು

ಕದಿಯಲಾರದೊಡವೆ ಅದುವೆ ಕಲ್ಲುಗುಡಿಯ ಶಿಲ್ಪವೊಂದೇ 

ಲೂಟಿಕೋರರೆದೆಯ ಒಳಗೂ ದೈವಭಕ್ತಿ ಭಯಗಳಿರಲು

ಗುಡಿಯ ತಂಟೆಗವರು ಬರದೆ ಉಳಿದು ಕೊಂಡವು

ಒಬ್ಬರನ್ನು ಒಬ್ಬರಾಳಿ ಎನಿತೋ ಕಾಲ ರಾಜ್ಯವಾಳಿ

ಅಳಿದು ಹೋದ ಎನಿತೊ ನೃಪರು ದತ್ತಿದಾನ ಧರ್ಮವಿತ್ತು

ತಾವು ಕೂಡ ಗುಡಿಯ ಕಟ್ಟಿ ಕೆರೆಕಟ್ಟೆ ಕೋಟೆ ಕಟ್ಟಿ

ಜನರ ಮನದಿ ಸ್ಥಿರದಿ ನೆಲಸಿ ಇತಿಹಾಸದ ಪುಟಗಳಲ್ಲಿ

ರಾರಾಜಿಸುತಿರಲು ಆಗ ಶಿಲ್ಪ ಕಲೆಯ ತರುಲತೆಗಳು

ನಾಡೂಳೆಲ್ಲ್ಲಾ ಹಬ್ಬಿ ಬೆಳೆದು ಸಂವೃದ್ದಿಯಾಯಿತು

ರಾಜ್ಯ ಒಂದ ಹತ್ತು ರಾಜರಾಳಿ ಅಳಿದು ಹೋದಬಳಿಕ

ಕಲ್ಲು ಗುಡಿಗಳೆಮ್ಮ ಕಡೆದ ಶಿಲ್ಪಿಯ ಚಾತುರ್ಯದಿಂದ 

ಮಧುರವಾದ ಅನುಭೂತಿಯ ನಿತ್ಯಬರುವ ಪ್ರವಾಸಿಗರ

ಲಕ್ಷ ಲಕ್ಷ ಜನರ ಮನಕೆ ಮುದವ ನೀಡಿ ಬೆರಗು ಮಾಡಿ

ಸೃಷ್ಟಿ ಗೈದ ಕರ್ತರನ್ನು ಬಂದ ಜನರು ಸ್ಮರಿಸುವಂತೆ 

ಅವರ ಕಲೆಯ ಹೊಗಳುವಂತೆ ಗುಡಿಯ ಕಲೆಯೇ ಮಾಡಿದೆ

ಗುಡಿಯಲಿರುವ ಕೃತಿಗಳೆಲ್ಲ್ಲಾ ದೇವಧೈತ್ಯಯಕ್ಷರೆಲ್ಲ

ಪ್ರಾಣಿ ಪಕ್ಷಿ ಲೋಕವೆಲ್ಲ ಸಿದ್ದ ಸಾದ್ಯರೆಂಬ ಎಲ್ಲ

ಗುಡಿಯಲಿರುವ ವಿಗ್ರಹಗಳ ಅಸಂಖ್ಯಾತ ಲೋಕವೆಲ್ಲ

ಕರ್ತರ ಕೈಂಕರ್ಯ ಋಣವ ನಿತ್ಯವಲ್ಲಿ ಸಲ್ಲಿಸುತ್ತ 

ಇಂದು ಮುಂದು ಎಂದೆಂದಿಗೂ ಸೌಂದರ್ಯವ ತೋರಿಸುತ್ತ

ಇತಿಹಾಸವು ಮರೆತ ಹೆಸರ ಕೃತಿಗಳಲ್ಲಿ ಜಪಿಸಿವೆ

                ಆ ಕೃತಿಗಳಲ್ಲೇ ಜಪಿಸಿವೆ

 

ರಚನೆ : ಎಸ್.ಪಿ. ಜಯಣ್ಣಾಚಾರ್ ಶಿಲ್ಪಿ

    ಕನರ್ಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು

       'ಕಲಾಕುಟೀರ' ನಾರಾಯಣಪುರ ಎರಡನೇ ತಿರುವು

       ಚಿಕ್ಕಮಗಳೂರು -577101

ಮೊಬೈಲ್ : 9343553494