ಮಿತಿ ಮೀರಿ ಹರಡುತ್ತಿದೆ ತಾಳಲಾರದ ತಾಪ
ಅಯ್ಯೋ ಇದೆಂತಹ ಶಾಪ?
ಎಲ್ಲರ ಮನದಲ್ಲೂ ಅಡಗಿದೆ ಕೋಪ
ಧರೆಗಿಳಿದು ಬೆಳಗು ಎಲ್ಲರಲೂ ಶಾಂತಿದೀಪ
ಕಾಣುತ್ತಿಲ್ಲವೆ ನಿರೀಕ್ಷೆಯ ದಾಹ
ಬಳಲುತ್ತಿದೆ ಎನ್ನ ಜೀವ
ಏನಿದು ನಿನ್ನ ಪರೀಕ್ಷೆ
ಸಾಕು ಮಾಡು ಮೌನದ
ಕಾರ್ಮೋಡದ ಅಂಬರವು ಮಳೆಯ ಸೂಚಿಸಿ ನಿಂತಿದೆ
ಬಾ, ಧರೆಯನಪ್ಪು ನಮೆಲ್ಲರನು ಜಾಸ್ತಿ ಕಾಡದೆ
ಇನ್ನೂ ಏಕೆ ನಿನ್ನಲಿ ಧುಮಿಕ್ಕಲು ಗೊಂದಲ
ಈಗಾಗಲೆ ಕೆರಳಿದೆ ನಿನ್ನ ನೋಡುವ ಹಂಬಲ
ತಂಗಾಳಿಯು ನಿನ್ನ ಆಗಮನದ ಪಿಸುಮಾತನು ತಿಳಿಸಿದೆ
ಅದನ್ನಾಲಿಸಿ ಮನ ಉಲ್ಲಾಸದಿ ತೇಲಾಡಿದೆ
ತುಂತುರು ಇಂಚರ ಚಿಮ್ಮಿದ ಮುಗಿಲು ರಂಗು ಚೆಲ್ಲಿ ನಿಂತಿದೆ
ಏಳು ವರ್ಣದ ರಂಗವಲ್ಲಿಯು ಮನದುಂಬಿದೆ
ಹಸಿರು ತುಂಬಿದೆ, ಉಸಿರು ಬಂದಿದೆ ಧನ್ಯವೋ ನನ್ನ ಜೀವ
ಹೀಗೆ ಸುವೃಷ್ಠಿ ಸುಭಿಕ್ಷೆತೆಯತ್ತ ದೇಶ ನದೆಯಲಿ ಓ ಪರ್ಜನ್ಯ ದೇವ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!