ಸುಪ್ತ ಮರಕಟದೆದುರು ಕೌತುಕದ ಕಿಡಿಕಾರಲು,

ಕಿಚ್ಚು ಹುಚ್ಚೆದ್ದು ಅದನ್ನು ಸುಡುತಿಹೆ॥

ತಿಳಿವಂಬಲದ ಧಗೆಗೆ ಉಪಶಮನ ತೋರದೆ,

ನಿರೀಕ್ಷೆಯ ಸಿಂಚನದಿಂ ಬಡಜೀವವ ಕಾಡಿಹೆ॥

ಪರಿವೇ ಇಲ್ಲದೆ ಮುಗ್ಧತೆಯಿಂದಲಿ ನೀನ್ 

ಸಿಹಿ ಮೌನದ ಮಡಿಲಲಿ ಶರಣಾಗಲು,

ಗುಟ್ಟು ರಟ್ಟಾಗುವುದೋ, ಸುಟ್ಟು ಹಿಟ್ಟಾಗುವುದು

ಎಂಬ ಸಂಶಯ ಹುಟ್ಟಿದೆ॥