ಮನಸ್ಸು: 'ಭೂತದ ಜಟರದಲಿ ನೆನಪಿನ ಕಂಬಳಿ ಹೊದ್ದು ಬೆಚ್ಚಗೆ ಅವಿತು ಕುಳಿತಿಹೆ ನಾನು!!'

 

ಬುದ್ಧಿ: 'ಅಂಜಿನ ಮಂಜಲಿ ಭರವಸೆಯ ಪಂಜು ಹಿಡಿದು, ಭವಿಷ್ಯವ ಹುಡುಕುತ ಹೊರಟಿಹೆ ನಾನು!!'

 

ಹೃದಯ: ಈ ಅರ್ಥವಿಹೀನ ಗಲಬೆ ನೋಡಿ ಮುಗುಳ್ನಗುತ,

'ನೆನೆಪಿನ ವಿಪಿನದಲಿ ಬೆಳೆದಿಹುದು ವಿಷಾದದ ಹೂದೋಟ!

ಯಾರು ಕಾಣದ ನಾಳಿನ ಪರದೆಯ ಹಿಂದಿರುವುದೆಲ್ಲಾ ಆ ಶಿವನಾಟ!

ಇಂದು ಈ ಕ್ಷಣಕೆ ಜೀವ ತುಂಬಿ ಆರಾಧಿಸುವುದ ನೀ ಕಲಿಯೋ, ಅದುವೇ ಜೀವನ ಪಾಠ!'