ಮೈಸೂರು ವಿಶ್ವದ್ಯಾನಿಲಯ ಕನ್ನಡ ವಿಶ್ವಕೋಶವನ್ನು ಪ್ರಕಟಿಸಿದೆ. ಅದು ಸುಮಾರು ಮೂರು ದಶಕಗಳಷ್ಟು ಹಳೆಯದು. ಮೈಸೂರು ವಿಶ್ವವಿದ್ಯಾನಿಲಯವು ಈ ವಿಶ್ವಕೋಶವನ್ನು ಅಂಕೀಕರಿಸಿ (digitization) ಯುನಿಕೋಡ್‍ಗೆ ಪರಿವರ್ತಿಸಿ ಅದನ್ನು ಮುಕ್ತ ಪರವಾನಗಿಯಲ್ಲಿ ಪುನಃ ಬಿಡುಗಡೆ ಮಾಡಲು ಸೆಂಟರ್ ಫಾರ್ ಇಂಟರ್‍ನೆಟ್ ಆಂಡ್ ಸೊಸೈಟಿಯ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಯೋಜನೆಯ ಮೊದಲ ಹಂತದಲ್ಲಿ ವಿಶ್ವಕೋಶದ ಮೊದಲ ಆರು ಸಂಪುಟಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ವಿಶ್ವಕೋಶದ ಲೇಖನಗಳನ್ನು ಪ್ರತ್ಯೇಕಿಸಿ ಯುನಿಕೋಡ್‍ಗೆ ಪರಿವರ್ತಿಸಿ ಅವುಗಳನ್ನು ಕನ್ನಡ ವಿಕಿಸೋರ್ಸ್‍ಗೆ ಸೇರಿಸಲಾಗುವುದು. ಈ ಲೇಖನಗಳು ಕನ್ನಡ ವಿಕಿಪೀಡಿಯದ ಲೇಖನಗಳಿಗೆ ಮಾಹಿತಿಯನ್ನು ಪೂರೈಸಿ ಲೇಖನಗಳ ಗುಣಮಟ್ಟವನ್ನು ಮತ್ತು ಸಂಖ್ಯೆಯನ್ನು ಹೆಚ್ಚಿಸಿ ತನ್ಮೂಲಕ ಕನ್ನಡ ವಿಕಿಪೀಡಿಯವನ್ನು ಶ್ರೀಮಂತಗೊಳಿಸುತ್ತವೆ. (  ___LINK_OPEN_href="https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%AF%E0%B3%8B%E0%B2%9C%E0%B2%A8%E0%B3%86/%E0%B2%AE%E0%B3%88%E0%B2%B8%E0%B3%82%E0%B2%B0%E0%B3%81_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%A8%E0%B2%BF%E0%B2%B2%E0%B2%AF_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%95%E0%B3%8B%E0%B2%B6_%E0%B2%AA%E0%B2%B0%E0%B2%BF%E0%B2%B5%E0%B2%B0%E0%B3%8D%E0%B2%A4%E0%B2%A8%E0%B3%86_%E0%B2%AF%E0%B3%8B%E0%B2%9C%E0%B2%A8%E0%B3%86"___ನೋಡಿ  )

ಈ ಯೋಜನೆಯಲ್ಲಿ  ಕನ್ನಡ ವಿಕಿಪೀಡಿಯದ ಮುಂದಾಳಾದ  ಶ್ರೀಯುತ  ಪವನಜರಿಂದ  ಒಂದು ಯೂನಿಕೋಡ್ ಪಠ್ಯದ ಕಡತವನ್ನು ತೆಗೆದುಕೊಂಡು ಸುಮಾರು ಇನ್ನೂರು ಪುಟಗಳಷ್ಟು ಮಾಹಿತಿಯನ್ನು  ಸುಮಾರು ಇನ್ನೂರು ತಲೆಬರಹಗಳ ಅಡಿಯಲ್ಲಿ ನಾನು ಸೇರಿಸಿದ್ದೇನೆ - ಇವು 'ಉ' ಅಕ್ಷರದಿಂದ ಆರಂಭವಾಗುವ ಮಾಹಿತಿಪುಟಗಳು.   ನಾನು ಮತ್ತು ಇತರರು ಸೇರಿಸಿದ ಬರಹಗಳ  ಪಟ್ಟಿಯನ್ನು  ___LINK_OPEN_href="https://kn.wikisource.org/wiki/%E0%B2%AE%E0%B3%88%E0%B2%B8%E0%B3%82%E0%B2%B0%E0%B3%81_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%A8%E0%B2%BF%E0%B2%B2%E0%B2%AF_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%95%E0%B3%8B%E0%B2%B6"___ಇಲ್ಲಿ    ಕ್ಲಿಕ್ಕಿಸಿ ನೋಡಬಹುದು . ಈ ಕೊಂಡಿಯನ್ನು ಮುಂದಿನ ಉಪಯೋಗಕ್ಕೆಂದು  ಬೇಕಿದ್ದರೆ ಉಳಿಸಿಕೊಳ್ಳಿ . ಹಾಗೆಯೇ ಇಲ್ಲಿನ ಪುಟಗಳ ತಲೆಬರಹಗಳ ಮೇಲೂ ಕಣ್ಣಾಡಿಸಿ.  ( ಮುಂದೂ  ಇನ್ನಷ್ಟು ಮಾಹಿತಿಪುಟಗಳು ಇಲ್ಲಿ ಲಭ್ಯ ಅಗಬಹುದು. )