ಕರ್ನಾಟಕ ರಾಜ್ಯೋತ್ಸವಕನ್ನಡ ಹಬ್ಬದ ಶುಭ ಸಂದರ್ಭದಲ್ಲಿ ನಿಮಗೆಲ್ಲ ಶುಭ ಹಾರೈಕೆಗಳು .
ಈ ಸಂದರ್ಭದಲ್ಲಿ ನಿಮ್ಮಲ್ಲಿ ಬಹುತೇಕ ಜನಕ್ಕೆ ರಜ ಇದ್ದಿರಬೇಕು ಅಲ್ಲವೇ , ರವಿವಾರವೂ ಅದರ ಹಿಂದೆಯೇ ಬಂದಿದೆ. ಇವನ್ನು ಬಳಸಿಕೊಂಡು
೧) ___LINK_OPEN_href="https://kn.wikisource.org/wiki/%E0%B2%AE%E0%B3%88%E0%B2%B8%E0%B3%82%E0%B2%B0%E0%B3%81_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%A8%E0%B2%BF%E0%B2%B2%E0%B2%AF_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%95%E0%B3%8B%E0%B2%B6/%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95"___ನಮ್ಮ ಕನ್ನಡ ರಾಜ್ಯದ ಕುರಿತು , ___LINK_OPEN_href="https://kn.wikisource.org/wiki/%E0%B2%AE%E0%B3%88%E0%B2%B8%E0%B3%82%E0%B2%B0%E0%B3%81_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%A8%E0%B2%BF%E0%B2%B2%E0%B2%AF_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%95%E0%B3%8B%E0%B2%B6/%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95_%E0%B2%8F%E0%B2%95%E0%B3%80%E0%B2%95%E0%B2%B0%E0%B2%A3"___ಅದರ ಏಕೀಕರಣದ ಕುರಿತು , ___LINK_OPEN_href="https://kn.wikisource.org/wiki/%E0%B2%AE%E0%B3%88%E0%B2%B8%E0%B3%82%E0%B2%B0%E0%B3%81_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%A8%E0%B2%BF%E0%B2%B2%E0%B2%AF_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%95%E0%B3%8B%E0%B2%B6/%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95_%E0%B2%87%E0%B2%A4%E0%B2%BF%E0%B2%B9%E0%B2%BE%E0%B2%B8"___ಅದರ ಇತಿಹಾಸದ ಕುರಿತು ನಮಗೆ ಎಷ್ಟು ಗೊತ್ತಿದೆ , ಎಷ್ಟು ಗೊತ್ತಿಲ್ಲ ಎಂದು ಪರೀಕ್ಷಿಸಿಕೊಳ್ಳಲು
ಈ ಕೊಂಡಿಗಳನ್ನು ನೋಡಿ . ( ಈ ಕೊಂಡಿಗಳು ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಕೋಶದ ಪುಟಗಳು ; ನಮಗೆ ಸಾಮಾನ್ಯವಾಗಿ ಗೊತ್ತಿಲ್ಲದ ಅನೇಕ ಸಂಗತಿಗಳು ಅಲ್ಲಿವೆ)
೨) ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಕನ್ನಡ ಬಳಸಲು ಪ್ರಯತ್ನಿಸಿ . ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ನಿಮ್ಮ ಮೊದಲ ಆದ್ಯತೆಯ ಭಾಷೆಯಾಗಿರಲಿ . ಎಲ್ಲೆಲ್ಲಿ ಎ.ಟಿ.ಎಮ್ ಗಳಲ್ಲಿ ಕನ್ನಡ ಆಯ್ಕೆ ಇದೆಯೋ ಅಲ್ಲೆಲ್ಲ ಕನ್ನಡ ಬಳಸಿ , ಬೇರೆ ಭಾಷಿಕರಿಗೆ ಕನ್ನಡ ನಿಮ್ಮ ಮೊದಲ ಆದ್ಯತೆಯ ಭಾಷೆ ಎಂದು ಗೊತ್ತಾಗುವಂತೆ ಮೊದಲಿಗೆ ಕನ್ನಡದಲ್ಲಿ ಮಾತನಾಡಿ , ಮೊಬೈಲ್ ಗಳಲ್ಲಿ , ಇಂಟರ್ನೆಟ್ಟಿನಲ್ಲಿ ಈಗಾಗಲೇ ಕನ್ನಡ ಬಳಸದಿದ್ದವರು ಇಂಗ್ಲೀಶು , ಕಂಗ್ಲೀಶುಗಳ ಬದಲಾಗಿ ಕನ್ನಡ ಬಳಸಲು ಆರಂಭಿಸಿ , ಉಳಿದವರಿಗೂ ಕನ್ನಡ ಬಳಸಲು ಪ್ರೇರೇಪಿಸಿ, ಕನ್ನಡದವರು ಕನ್ನಡ ಬಳಸದಿದ್ದರೆ ಇಂಗ್ಲೀಷರು , ಬೇರೆ ಭಾಶೆಯವರು ಬಳಸುವರೇ?
೩) ಕನ್ನಡ ಪತ್ರಿಕೆ , ಪುಸ್ತಕಗಳನ್ನು ಓದುವುದನ್ನ್ನು ಸಿನೆಮಾ , ನಾಟಕಗಳನ್ನು ನೋಡುವುದನ್ನು ನಿಲ್ಲಿಸಬೇಡಿ .
ಕನ್ನಡ ಉಳಿಸಿ , ಬಳಸಿ , ಬೆಳೆಸಿ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!