ಒಂದೆರಡು ನಾಲ್ಕಾಗಿ ಹೆಜ್ಜೆಗಳು ಸಾಗಿ ।

ನುಗ್ಗುತಿರುವವು ನೋಡು ಎರಡೆರಡು ಜೊತೆಯಾಗಿ॥

ಮೂಲೆಮನೆ ಮಾದಯ್ಯ ಕಡೆಯ ಓಣಿಯ ನಾಗಿ।

ನೋಡುತಿರುವರು ನಿಂತು ಮೈಯ್ಯೆಲ್ಲಾ ಬೆರಗಾಗಿ॥೧॥

ಮೇಯುವವು ದಿನದಿನವೂ ಕಂಬಳದ ಕೋಣ।

ಓಡುವವು ಅರೆಕ್ಷಣದಿ ಬಿಟ್ಟಂತೆ ಬಾಣ॥

ಇಂಚಿಂಚು ಕೊಬ್ಬಿ ನಿಂತಿರುವವು ಶಾನೆ।

ಬಂಡೆಗಲ್ಲಿನ ಮೈಯ್ಯಿ ಹೋಲುತಿರುವವು ಆನೆ॥೨॥

ಓಡೋಡುತಿರುವವು ಕೆಸರನ್ನ ಮೆಟ್ಟಿ।

ಅದರ ಬೆನ್ನಟ್ಟುತಿರುವನೀನಮ್ಮ ಗಟ್ಟಿ॥

ಬೆಳಕಿಗೂ ಮಿಗಿಲಾದ ವೇಗದಲಿ ಗುರಿಯ।

ಮುಟ್ಟಿಸಲು ಹವಣಿಸಿವೆ ಬಿಡಿಸದೆಯೆ ಸೆರೆಯ॥೩॥

ಮರೆಯಲಾರೆವು ನಾವು।

ಮರೆಸಲಾರಿರಿ ನೀವು॥

ಚಿತ್ರಿಸಿರುವಿರಿ ನೀವು ಅವುಗಳನು ಜೋಪಾನ।

ಇವುಗಳಲ್ಲವೇ ನಮ್ಮ ಸಂಸ್ಕೃತಿಗೆ ಸೋಪಾನ॥೪॥