ನೀ ಮು೦ದೆ ಸಾಗುತಿರಲು

ಭಯವ ಬಿಡು ನೀನು, ಎದೆಗು೦ದದಿರು ನೀನು|

ನೀ ಕುಗ್ಗದಿರು,ನೀ ಮು೦ದೆ ಸಾಗುತಲಿರು|| (ಪಲ್ಲವಿ)

ದೂರದೂರದಿ ಮೂಲೆಮೂಲೆಯಲಿ, ಕಗ್ಗತ್ತಲಲಿ,

ಭೀತಿಯ, ನೆರಳ ಗುರುತು ಕಾ೦ಬುದು.

ಹೆಗ್ಗಾಡಿನಲಿ, ವಸ೦ತ ತರುಗಿಡಗಳಲಿ,

ಮೇಲೆ ಕುಳಿತಿದ್ದ, ಪಕ್ಷಿಗಳ ಕೂಗು ಕೇಳುವಿದು.

ಹಾದಿ ನೋಡಿ ಮುನ್ನಡೆಯಲು,

ತನ್ನ ರೇಖೇಯನೆ ಮರೆತ್ತಿದ್ದವು.

ಎತ್ತಎ೦ಬುವ ಗಳಿಗೆಯಲಿ, ರಕ್ಷಕನು ಕೈಹಿಡಿದನು,

ದಡವ ಸೇರಿಸಿ, ಯಾರೆ೦ಬುದನು ನುಡಿಯದೆ ಮಾಯವಾದನು.