ಪ್ರೀತಿಯೆಂಬ ಯಕ್ಷಿಣಿ ಮೈ ಹೊಕ್ಕರೆ ಯಾರ ಮಾರು ಪತ್ಯೆಯಾಗುವುದಿಲ್ಲ

ದಿನ ಕ್ಷಣ ಅವನದೇ/ ಅವಳದೇ ನೆನಪು

ಮಾತು ತುಂಟಾಟ ಮರುಕಳಿಸುವ ಸಿ.ಡಿ. ಪ್ಲೇಯರ್ ಮನಸ್ಸು

ಹಿರಿಯರ ಮಾತು ಲೆಕ್ಕಕಿಲ್ಲ, ಸಮಾಜದ ಪರಿವೇ ಇಲ್ಲದೆ

ಎಲ್ಲಾರನ್ನೂ ದಿಕ್ಕಾರಿಸಿ ಜೋಡಿಯಕ್ಕಿಯಾಗಿ

ಹಾರಾಡಿ ಸ್ವೇಚ್ಛಾರಧಿ, ಕ್ಷಣಿಕ ಮನಸ್ಸಿನ ಆನಂದಕ್ಕೆ

ಎಲ್ಲಾವನೂ ತೊರೆದು, ಪ್ರೀತಿಸುವ ಅಪ್ಪ ಅಮ್ಮ, 

ಪ್ರೀತಿಸುವ ಅಣ್ಣ ತಂಗಿ, ಎಲ್ಲರೂ ದ್ವೇಷಿಗಳಂತೆ ಕಂಡು

ಪ್ರೀತಿಸಿದವನೇ ದೇವರು, ಎಲ್ಲಾ ಮುಗಿದಿ ವಾಸ್ತವತೆ

ಅರಿವಾಗುವುದು , ಮಗುವಾದಗ 

ಅಮ್ಮನ ನೆನಪು ಸಹೋದರಿ/ಸಹೋದರನ ನೆನಪು

ಪ್ರೀತಿ ಕೊಟ್ಟವ ಅರ್ಧಕ್ಕೆ ಕೈ ಕೊಟ್ಟು ಹೋದರೆ

ಅವಳಿಗೆ ಸಾವೇ ಗಿರಯಾಗಲೂ ಬಹುದು

ಧೀರೆಯಾಗಿ ಬುದುಕಿ ಸಾಧಿಸಲೂ ಬಹುದು

ಕಷ್ಟದ ದಿನಗಳಲ್ಲಿ ನಿನ್ನಿಂದ ‍ನಿನ್ನಿಂದ ಎಂದೂ 

ದೂಷಣೆ ಮಾಡುತ್ತಿರಲೂ ಬಹುದು

ಇಬ್ಬರ ದೂಷಣೆಯಿಂದ ಮಕ್ಕಳು ಹಾದಿ ತಪ್ಪಲೂ ಬಹುದು

ಈ ಪ್ರೀತಿಯೆಂಬ ಮಾಯೆಯೇ ಹೀಗೆ

ಎಲ್ಲವನೂ ಕಳೆದು ಕೊಳ್ಳಲು ಬಹುದು. .  . . ಎಲ್ಲವನು ಪಡೆದು ಕೊಳ್ಳಲು ಬಹುದು

ಇಡುವ ಹೆಜ್ಜೆ ಸರಿ ದಾರಿಯೇ‍ ತಪ್ಪು ದಾರಿಯೇ ಒಮ್ಮೆ ಅವಲೋಕಿಸಿ

ದೂರದ ಆಲೋಚನೆ ಯುವ ಪೀಳಿಗೆಗೆ ಇರಲಿ