ಹೋರಾಡಬೇಕಾಗಿದೆ.......

ಹೋರಾಡಬೇಕಾಗಿದೆ

ನಾವಿಂದು ನಮ್ಮಲ್ಲಿರುವ

ಆಕ್ರೋಶವನ್ನು ಹತ್ತಿಕ್ಕಲು!

ಹೋರಾಡಬೇಕಾಗಿದೆ

ನಾವಿಂದು ನಮ್ಮಲ್ಲಿರುವ ಸಂಕುಚಿತ ಮನೋಭಾವವನ್ನು ತೊಲಗಿಸಲು!

ಹೋರಾಡಬೇಕಾಗಿದೆ ನಾವಿಂದು

ನಮ್ಮಲ್ಲಿನ ಅಜ್ಞಾನ ಕಿತ್ತೊಗೆಯಲು!

ಹೋರಾಡಬೇಕಾಗಿದೆ ನಾವಿಂದು ಅರಿಷಡ್ವರ್ಗಗಳಿಂದ ಮುಕ್ತಿಯಾಗಲು!

ಹೋರಾಡಬೇಕಾಗಿದೆ ನಾವಿಂದು ಮನಸ್ಸಾಕ್ಷಿಯ ವಿರುದ್ಧ ನಾವು ತೆಗೆದುಕೊಳ್ಳುವ ನಿರ್ಧಾರದ ವಿರುದ್ಧ!

ಹೋರಾಡಬೇಕಾಗಿದೆ ನಾವಿಂದು ಪಕ್ಕದ ಮನೆಯ ಮಗುವಿನ ಮೊಗದ ಮೇಲೆ ನಗೆಹನಿ ತರಿಸಲು!

ಹೋರಾಡಬೇಕಾಗಿದೆ ನಾವಿಂದು ವೃದ್ಧಾಶ್ರಮ ರಹಿತ ದೇಶಕ್ಕಾಗಿ!

ಹೋರಾಡಬೇಕಾಗಿದೆ ನಾವಿಂದು ಭಿಕ್ಷುಕ ರಹಿತ ದೇಶಕ್ಕಾಗಿ!

ಹೋರಾಡಬೇಕಾಗಿದೆ ನಾವಿಂದು ಭ್ರಷ್ಟಾಚಾರರಹಿತ ಆಡಳಿತಕ್ಕಾಗಿ !

ಹೋರಾಡಬೇಕಾಗಿದೆ ನಾವಿಂದು ಸುಂದರ ನಾಳೆಗಳಿಗಾಗಿ!

-ವಿಶ್ವನಾಥ್ ಬಿ.ಎಮ್.