ನಾನಾಗಿದ್ದ ನಾನು

ಈಗ ನಾನಾಗಿಲ್ಲ

ನಾನಾಗಿಲ್ಲದ ನಾನು

ಮತ್ತೆ ನಾನಾಗಲು

ಮತ್ತೆ ಮತ್ತೆ ಯತ್ನಿಸಿ

ನಾನೇ ಆಗಬೇಕೆಂದು

ನಿರ್ಧರಿಸಿರುವೆ

ನಾನು ನಾನೇ ಆಗಲು

ನಿಮ್ಮ ಸಹಕಾರವೂ ಬೇಕು

ನಾನಿರುವ ಹಾಗೆಯೇ

ನನ್ನನ್ನು ಸ್ವೀಕರಿಸಿ

ಆಗ ನಾನಲ್ಲದ ನಾನು

ನಾನೇ ಆಗುವುದು ಸುಲಭ

ನನ್ನಲ್ಲಿ ನಿಮ್ಮನ್ನು

ಹುಡುಕಬೇಡಿ

ನಾನೂ ಸಹ ನಿಮ್ಮಲ್ಲಿ

ನನ್ನನ್ನು ಹುಡುಕುವ

ಗೋಜಿಗೆ ಹೋಗುವುದಿಲ್ಲ

ನೀವೂ ನೀವೇ ಆದರೆ

ನಾನೂ, ನಾನೇ ಆಗುವೆ