ಅಂದಿನ ನನಗೂ

ಇಂದಿನ ನನಗೂ

ಮುಂದಿನ ನನಗೂ

ಬಹಳ ವ್ಯತ್ಯಾಸವಿದೆ

ಅಂದಿನ ನಾನು

ನಾನಾಗಿದ್ದೆ

ಇಂದಿನ ನನ್ನಲ್ಲಿ

ಮೊದಲಿದ್ದ ಆ ನಾನು ಇಲ್ಲ

ಮುಂದಿನ ನಾನು

ನಾನಾಗಿರುವೆನೇ?

ಗೊತ್ತಿಲ್ಲ