ನಾನೂ ಬದಲಾಗಿದ್ದೇನೆ
ಮೊದಲಿನ ಮುಗ್ದತೆಯಿಲ್ಲ
ಆ ಪರಿಶ್ರಮ ಇಲ್ಲವೇ ಇಲ್ಲ
ಗುರಿಯಂತೂ ಕೇಳಲೇ ಬೇಡಿ
ವಿಧೇಯ ವಿದ್ಯಾರ್ಥಿಯಾಗಿದ್ದೆ
ಈಗ ಶಿಕ್ಷಕನಾಗಿದ್ದೇನೆ
ವಿಧೇಯ ವಿದ್ಯಾರ್ಥಿಗಳಿಗಾಗಿ
ಹುಡುಕುತ್ತೇನೆ, ನಿರೀಕ್ಷೆಯಲ್ಲ
ಉತ್ತಮ ವಿದ್ಯಾರ್ಥಿಯಾಗಿದ್ದೆ
ಅದು ಬಹು ಸುಲಭ
ಉತ್ತಮ ಶಿಕ್ಚಕನಾಗಲು
ನಿರಂತರ ಶ್ರಮಿಸುತ್ತೇನೆ
ಆದರೂ ಕಠಿಣ
ನಿರಂತರ ಬದಲಾಗುತ್ತಲೇ
ಇದ್ದೇನೆ
ಅಮ್ಮನೂ ಹೇಳುತ್ತಾಳೆ
ನಾನು ಬಹಳ ಬದಲಾಗಿದ್ದೇನೆಂದು
ಈಗೀಗ ಹೆಂಡತಿಯೂ
ಹೇಳುತ್ತಾಳೆ
ನಾನು ಮೊದಲಿನಂತಿಲ್ಲವೆಂದು
ನನಗೂ ಹಾಗೇ
ಅನ್ನಿಸತೊಡಗಿದೆ
ಊರಿನವರೂ ಹೇಳುತ್ತಿದ್ದಾರೆ
ನಾನು ದೊಡ್ಡವನಾಗಿದ್ಸೇನೆಂದು
ನಿಜ ಹೇಳಬೇಕೆಂದರೆ
ನಾನು ಸಣ್ಣವನಾಗಿಬಿಟ್ಟಿದ್ದೇನೆ
ದೇವರಲ್ಲಿ ಪ್ರಾರ್ಥಿಸಿರುವೆ
ನನ್ನನ್ನು ಮೊದಲಿನ ಆ
ಸಣ್ಣವನನ್ನಾಗಿ ಮಾಡೆಂದು.
ಈ ಬದಲಾವಣೆಯನ್ನು
ಎದಿರುನೋಡುತ್ತಿರುವೆ
ನಿರೀಕ್ಷಿಸುತ್ತಿರುವೆ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!