-53-

-ನನ್ನ ನಡೆನುಡಿಗಳನ್ನು ಅನುಕರಿಸಿ ಅಣಕ ಮಾಡುವ ನಿಮ್ಮ ಹುಡುಗನಿಗೆ ಈ ತರಹ ಮಾಡದಂತೆ ತಿಳಿಹೇಳಿದಿರಾ ?

-ಓಹೋ , ಮೂರ್ಖನ ಹಾಗೆ ಆಡಬೇಡ ಅಂತ ಹೇಳಿದ್ದೇನೆ.

-54-

-ಅವಳ ಜತೆ ನನ್ನ ಮದುವೆ ಗೊತ್ತಾಗಿದೆ ಅಂತ ಎಲ್ಲರೂ ಆಡಿಕೊಳ್ತಾ ಇದ್ದಾರೆ.

-ಹೌದಾ ? ಈ ಸುದ್ದಿ ನಿಜವಾಗಿದ್ದರೆ ನಿನ್ನನ್ನು ಅಭಿನಂದಿಸ್ತೇನೆ , ಇಲ್ಲವಾದರೆ ಅವಳನ್ನು ಅಭಿನಂದಿಸ್ತೇನೆ!

-55-

-ಅವನು ಮದುವೆಯ ದಿನ ಹಸೆಮಣೆಯಿಂದ ಓಡಿ ಹೋಗಿಬಿಟ್ಟ!

-ಏನು ? ಧೈರ್ಯಗೆಟ್ಟು ಓಡಿ ಹೋದನೇ ?

-ಇಲ್ಲ , ಧೈರ್ಯ ಮಾಡಿ ಓಡಿ ಹೋದ !

-56-

-ಅವಳ ಜೊತೆ ನಿಶ್ಚಯವಾಗಿದ್ದ ನಿನ್ನ ಮದುವೆ ಮುರಿದು ಹೋಯಿತಂತೆ ?

-ಹೌದು, ಅವಳಿಗೆ ನಾನು ಬೇಡವಂತೆ

-ನಿನಗಿರೋ ಶ್ರೀಮಂತ ಚಿಕ್ಕಪ್ಪನ ಬಗ್ಗೆ ಹೇಳಬೇಕಿತ್ತು ?

-ಹೇಳಿದೆ.… ಈಗ ಅವಳು ನನ್ನ ಚಿಕ್ಕಮ್ಮ.