-57-

-ಅವನನ್ನು ನೀನು ಮದುವೆ ಆಗ್ತೀಯಾ ?

-ಅದು ಪರಿಸ್ಥಿತಿಯನ್ನು ಅವಲಂಬಿಸಿದೆ

-ಏನು ಪರಿಸ್ಥಿತಿ ?

-ಅವನ ಆರ್ಥಿಕ ಪರಿಸ್ಥಿತಿ!

-58-

ಅವನು ಹೇಳಿದ - ನೀನು ನನ್ನನ್ನು ಮದುವೆ ಆಗಲು ನಿರಾಕರಿಸಿದರೆ ನಾನು ಸತ್ತೇಹೋಗುವೆ

ಅವಳು ನಿರಾಕರಿಸಿದಳು.

ಅವನು ಸತ್ತೇಹೋದ -ಅರವತ್ತು ವರ್ಷಗಳ ನಂತರ.

-59-

- ಚೆನ್ನಾಗಿ ಅಡುಗೆ ಮಾಡುವವಳನ್ನ , ಹಾಗೇ ಸುಂದರಿಯನ್ನ ಮದುವೆ ಆಗೋ ವಿಚಾರ ನನ್ನದು.

- ಹಾಗೆಲ್ಲ ಇಬ್ಬಿಬ್ರನ್ನ ಮದ್ವೆ ಆಗೋ ಹಾಗೆ ಇಲ್ಲಯ್ಯ

-60-

ಹೆಂಡತಿ ( ಆಸ್ಪತ್ರೆಯಲ್ಲಿ ) - ನನ್ನ ಗಂಡನ ಸ್ಥಿತಿ ಸುಧಾರಿಸಿದೆ ಅಂತ ಅನಿಸುತ್ತದೆ, ಮನೆಗೆ ಹೋಗೋಣ ಅಂದರು.

ನರ್ಸ್ - ಹಾಗೋ ? ಬಹುಶಃ ಅನಾಸ್ಥೆಸಿಯದ ಪರಿಣಾಮ ಇನ್ನೂ ಇದೆ.