-69-

- Monologue ಅಂದರೆ ಏನು ಅಪ್ಪಾ ? ನಿಘಂಟಿನಲ್ಲೇನೋ ಆತ್ಮಾಲಾಪ , ಸ್ವಗತ ಅಂತೆಲ್ಲಾ ಇದೆ?

- ಅದಾ ? ಅದು ಗಂಡಹೆಂಡಿರ ಸಂಭಾಷಣೆ, ಮಗನೇ!

-70-

- ಅವನು ನಿನ್ನ ಹೆಂಡತಿಯೊಂದಿಗೆ ಓಡಿ ಹೋದದ್ದು ಕೇಳಿ ನನಗೆ ಆಘಾತವೇ ಆಯಿತು. ಅವನು ನಿನ್ನ ಒಳ್ಳೆಯ ಗೆಳೆಯ ಅಂತ ನಾನು ತಿಳಿದಿದ್ದೆ ?

-ಅವನು ಈಗಲೂ ನನ್ನ ಒಳ್ಳೆಯ ಗೆಳೆಯನೇ. ಆದು ಅವನಿಗಿನ್ನೂ ತಿಳಿದಿಲ್ಲ , ಅಷ್ಟೇ.

-71-

-ರೀ , ಇವತ್ತು ನನ್ನ ಇಪ್ಪತ್ತೈದನೇ ಹುಟ್ಟಿದ ಹಬ್ಬ. ನೀವು ನನಗೇನೂ ಉಡುಗೊರೆ ಕೊಡಲೇ ಇಲ್ಲ.

-ಇಪ್ಪತ್ತೈದು ? ಇಪ್ಪತ್ತೈದನೇ ಹುಟ್ಟಿದ ಹಬ್ಬದ ಉಡುಗೊರೆಯನ್ನು ಎರಡು ವರ್ಷಗಳ ಹಿಂದೆಯೇ ಕೊಟ್ಟಿರುವೆ, ನೀನು ಮರೆತಿದ್ದೀಯ ಚಿನ್ನಾ.

-72-

-ಮೇಡಂ , ನಾನು ಯಾವುದೇ ವಸ್ತುವನ್ನೂ ರಿಪೇರಿ ಮಾಡುತ್ತೇನೆ. ನಿಮ್ಮ ಹತ್ತಿರ ಏನಾದರೂ ಕೆಟ್ಟು ಹೋಗಿದೆಯೇ ?

-ನನ್ನ ಗಂಡ ಒಳಗೆ ಇದ್ದಾರೆ , ಬನ್ನಿ