ಅವಳ ಕಣ್ಣ ಕಾಂತಿಯು

ನನ್ನೆದೆಯ ಗೋಡೆಯ ಸೀಳಿ

ಹೃದಯದೊಳಗೆಲ್ಲ ಹರಡಿತು ಬೆಳ್ಳಿ ಬೆಳದಿಂಗಳ !

ಆ ಬೆಳಕಲ್ಲಿ ಕಂಡೆನವಳ

ಮೊಗವ, ಮುದ್ದು ನಗುವ

ಕಣ್ಣ ಮಿಟುಕಿಸಿ ಮತ್ತೆ ನೋಡಲು ಬೆಳಗು ಮೂಡಿದೆ ಜಗದೊಳು..

ಛೆ! ಮತ್ತೆ ಕತ್ತಲು ಮನದೊಳು ... !!!