ಸಂಜೆಗತ್ತಲು ಮಬ್ಬು

ಇನ್ನು ತುಂಬಿಲ್ಲ ಪಬ್ಬು..

ಭುವಿಯಾಳದಲಿ ಬಿಸಿಲ ನಂಜು

ಲೋಟದೊಳು ಕರಗುತಿದೆ ಮಂಜು

ನನ್ನ ಮಾತೆಲ್ಲ ಮುಗಿದು

ಮುಗಿಲು ಮುನಿದಂತೆ ಕವಿದು...

ಬಿಳುಪಾಯ್ತು ಕರಿ ಮೋಡದಂಚು

ನಿನ್ನ ಬೆರಳಲ್ಲಿ ಉಂಗುರದ ಮಿಂಚು

ಮಳೆ ಸುರಿದು ಇಳೆ ತಣಿದು

ಒಲವಿನಾರಂಭ..!