ಮನಸ್ಸಿನ ಪ್ರತಿ ಪುಟದಲಿ
ನಿನ್ನದೇ ಯೋಚನೆ
ನೀ ದೂರಹೋದರೂ
ಕಾಯುತ್ತಿದೆ ಹೃದಯದರಮನೆ!
ಪ್ರೀತಿ ಬಯಸಿ ಬಳಿ ಬಂದೆ
ಖಾಲಿ ಮನಸಲಿ ಆಸೆ ತುಂಬಿದೆ
ಕನಸಲ್ಲಿ ನೀನೇ ಕಾಣಿಸುವೆ
ಮುಗ್ಧ ಮನಸ್ಸು ಹಠವ ಮಾಡುತ್ತಿದೆ!
ಕಪಟವಿರದ ಪ್ರೀತಿಯನು
ಅನುಮಾನಿಸಿದೆ ನೀನಿಂದು
ಎಲ್ಲಿದ್ದರೂ ಬಂದು ಮನ್ನಿಸು
ತಪ್ಪು ಮಾಡದ ಈ ಹೃದಯವನ್ನಿಂದು!
ಸಾವಿರ ಜನುಮವಿದ್ದರೂ
ನಾ ಬಯಸುವೆ ನಿನ್ನವಳಾಗಿರಲು..
ನನ್ನೊಲವಿನಿಂದ ಬರೆದ ಕವಿತೆಗಳೆಲ್ಲ
ನಿನಗೆ ಮಾತ್ರವೇ ಮೀಸಲು!
ಪ್ರಿಯಾಂಕ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!