ಆಸ್ತಿಕ ಮಾಸ್ತಿಗೆ

ನಾಸ್ತಿಕರೊಬ್ಬರು ಕೇಳಿದರು  

'ದೇವರ ನೀವು ನಂಬುವಿರ

ಅವನ ಇರುವಿಕೆಗೆ ಸಾಕ್ಷಿಇದೆಯ?'

 

ನಕ್ಕರು ಮಾಸ್ತಿ, 

ನುಡಿ ಸ್ವಸ್ತಿ,

 

’’ತಾಯಿಯ ನೆನೆ

ಅವಳಲ್ಲವೆ ಮಮತೆಯ ಕೆನೆ?

ನಿಸ್ವಾರ್ಥ ಕಳಕಳಿ ಕರುಣೆ

ಅವಳ ವಾಂಛೆಗೆಲ್ಲಿಯ ಎಣೆ!

ದೈವ ಭಾವ ಅಮೂರ್ತತೆ ... 

ಅದರ ಮೂರ್ತ ರೂಪವೆ ಮಾತೆ

 

ಮಾತೃತ್ವದ ಹೃದಯ

ಜೀವಿಗಳಿಗೆ ಕೊಟ್ಟ ಅದ್ಭುತವೆ

ದೇವನಿರುವಿಗೆ ಸಾಕ್ಷಿಯಲ್ಲವೆ?”

 

ಉತ್ತರಿಸಿದರು

ಮಗುವಿನ ನಗುವಿನ ಮಾಸ್ತಿ 

ನುಡಿ ಸ್ವಸ್ತಿ

 

                        - ಅನಂತ ರಮೇಶ್