ಅಂತರಾಳದೊಳಗೊಬ್ಬ ಶಿವನಿಲ್ಲದಿರೆ

ಶವವದು ಆ ಜೀವ

ಶಿವನಿದ್ದು ಅದ ಅರಿಯದಿದ್ದರೆ

ಆತ ಶವಕ್ಕಿಂತಲೂ ಕೀಳಾದವ

ಅಂತರಾಳದೊಳಗೊಬ್ಬ ಶಿವನಿಲ್ಲದಿರೆ?!!!

ಶವವಾದರೂ ಕಣ್ಣು ತೆರೆದೀತು,

ಕಣ್ಣೀರು ಸುರಿಸೀತು

ಹೃದಯ ಬಡಿಯದಿದ್ದರೂ, ಮನ ಮಿಡಿದೀತು

ಶಿವನಿದ್ದು ಶವದಂತಿಹ ಜೀವ

ಮಿಡಿಯುವುದೆ? ತುಡಿಯುವುದೆ?

ಅಂತರಾಳದೊಳಗೊಬ್ಬ ಶಿವನಿಲ್ಲದಿರೆ?!!!

ಘೋರಾತಿ ಘೋರ, ಭಯಂಕರ ಏನಿಹುದು ಅರಿವುಂಟೆ?

ನರಕದ ಬಾಗಿಲು ಭಯಂಕರ, ಅದರೊಡಲು ಘನ ಘೋರ

ತನ್ನೊಳಗಿನ ಚಿನ್ಮಯನನ್ನರಿಯದ ನರ

ಅದ ಮೀರಿದ ನರಕ ಸೃಷ್ಟಿಸಬಲ್ಲ ಕ್ರೂರ

ಅಂತರಾಳದೊಳಗೊಬ್ಬ ಶಿವನಿಲ್ಲದಿರೆ?!!!

ಸದ್ಭುದ್ಧಿ, ಸಧರ್ಮ, ಸುಕೃತ, ಸದಾಚಾರ

ಅರಿತು, ಅರ್ಥೈಸಿ, ಮನನ ಮಾಡಿ ಆಚರಿಸು

ಮೋಕ್ಷಾನಂತರದ ಸ್ವರ್ಗದ ಸವಿಯನು

ಜೀವವಿರೆ ಭೂಮಿಯೊಳು ನೀ ಅನುಭವಿಸು

ಶಿವನಿರುವ ಜೀವವ ಶಿವಮೆಚ್ಚೆ ನೀ ನಡೆಸು

II ಸರ್ವಂ ಸ್ವರ್ಗಮಯಂ II

ಅಂತರಾಳದೊಳಗೊಬ್ಬ ಶಿವನಿಲ್ಲದಿರೆ?!!!