ಅಪ್ಪಳಿಸುವ ಅಲೆ ಒಳಗೆ,
ಶಾಂತತೀರದ ನಗು ಹೊರಗೆ,
ಅಭಿವ್ಯಕ್ತಿಸುವ ಆ ಬಗೆ,
ಹೇಗೆ ಒಲಿಯಿತೆ ನಿನಗೆ?
ಕಣ್ಣಿನಲಿ ಕಂಡಿಲ್ಲ,
ಕರಗಳಲಿ ಸ್ಪರ್ಶಿಸಲಿಲ್ಲ,
ಕರುಳಮಿಡಿತದೊಳಗೆ
ಜಗವ ನೀ ಅರಿವೆ ಹೇಗೆ?
ಭತ್ತದ ದೃಢತೆಗೆ,
ಪ್ರೀತಿಯ ನೀರೆರೆದು,
ಅನ್ನದ ಮೃದುತನವೀವ,
‘ಭಾವ’ ಜೀವವೆ ನೀನಲ್ಲವಾ?
ನೀನೆ ಧರೆ, ನೀನೆ ಪರಂಪರೆ,
ನೀನೆ ಶಕ್ತಿ, ನೀನೆ ಯುಕ್ತಿ,
ನಾನಿಲ್ಲದೆ ಜಗವಿಲ್ಲಎಂಬ ರವಿರಾಯನು,
ನಿನ್ನ ಮಮತೆಯೆದುರು ‘ಶೂನ್ಯ’ದಂಚಿಗೆ ತಲುಪುವನು!
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!