ಮೂಲ ಹಾಡನ್ನು ಇಲ್ಲಿ - https://youtu.be/G6pt7nij6WQ - ನೋಡಿಕೊಂಡು ಬನ್ನಿ - ಕೆಳಗಿನ ನನ್ನ ಅನುವಾದವನ್ನು ಅದೇ ಧಾಟಿಯಲ್ಲಿ ಹಾಡಲು ಪ್ರಯತ್ನಿಸಿ!!)

ಹೊರಳುತಲೇ ಇದ್ದೆ ನಾನು ರಾತ್ರಿ ಎಲ್ಲವೂ

ನಿನ್ನ ಆಣೆಗೂ , ನಿನ್ನ ಆಣೆಗೂ I

ಚಿಂತೆ ಬಿಡು , ಅಗಲಿಕೆಯು ಬೇಗ ಮುಗಿವುದು

ನಿನ್ನ ಆಣೆಗೂ , ನಿನ್ನ ಆಣೆಗೂ II

ನಿನ್ನ ನೆನಪು ತನ್ನ ಜತೆಗೆ ತರುವುದು ತಾ ನೋವನು

ಕಣ್ಣು ಮುಚ್ಚಾಲೆ ನಿದಿರೆ ಜತೆಗೆ ರಾತ್ರಿಯೆಲ್ಲವೂ

ರಾತ್ರಿಯಿಡೀ ವೈರಿ ನನಗೆ ತಿಂಗಳ ಬೆಳಕು

ಬೆಂಕಿಯಂತೆ ಸುಡುತಲಿತ್ತು ಇಬ್ಬನಿ ಹನಿ

ನಿನ್ನ ಆಣೆಗೂ , ನಿನ್ನ ಆಣೆಗೂ ||

ನಿನ್ನ ಜತೆಗೆ ಮುನಿದರೆ ನಾ , ಸಮಾಧಾನಿಸು ನನ್ನ ನೀ

ದೂರ ನಾನು ಹೋಗೆ ನೀನು ಬಳಿಗೆ ಕರೆವುದು

ತಪ್ಪ ನಾನು ಮಾಡಿದೊಡೆ ನನ್ನ ಆಲಂಗಿಸು

ಎಂದು ಕೂಡ ಮುರಿಯದಿರಲಿ ನಮ್ಮದೀ ಬಂಧವು

ನಿನ್ನ ಆಣೆಗೂ , ನಿನ್ನ ಆಣೆಗೂ ||