ಮಲೆಯಾಳಂ ಭಾಷೆಯಲ್ಲಿ ಗಾಯಕ ಜೇಸುದಾಸ್ ಅವರ ಒಂದು ಇಂಪಾದ ಹಾಡು - 'ನೀರ್ಮಿಳಿ ಪೀಲಿಯಲ್ ನೀರ್ಮಣಿ ತುಳುಂಬಿ'. ಇದನ್ನು ಇಲ್ಲಿ ಕೇಳಿ - https://youtu.be/kgLN-Z_YhzI
ಇದರ ಅರ್ಥ ಇಂಗ್ಲೀಷಿನಲ್ಲಿ
https://lyricstranslate.com/en/neermizi-peeliyil-neermani-tears-spilling.html ಕೊಂಡಿಯಲ್ಲಿ ಸಿಕ್ಕಿತು. ಅದನ್ನು ಬಳಸಿಕೊಂಡು ನಾನು ಅದನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ . ಮೂಲದ ಧಾಟಿಯಲ್ಲಿಯೇ ನನ್ನ ಅನುವಾದವನ್ನೂ ಹಾಡಬಹುದು.
ಕಣ್ಣಲಿ ಕಂಬನಿ ತುಳುಕಿರಲು
ಅವುಗಳ ನೀನು ತಡೆದಿರಲು
ಕಂಬನಿ ತೊಡೆಯದೆಯೇ, ನಾ
ಏನನೂ ನುಡಿಯದೆಯೇ
ನಿಂತೆನು ಪರಕೀಯ, ನಾ
ಪೂರಾ ಪರಕೀಯ
ಎದೆಯ ಒಳಗೋ ಸ್ನೇಹದ ಕಡಲು , ಹೊರ -
ಹೊಮ್ಮಲೇ ಇಲ್ಲ ಒಂದು ಹನಿ ತಾನು
ಮನಸಿನ ಭಾವವ ಮೌನದಿ ಅಡಗಿಸಿ ನಾವು
ಕುಳಿತೆವು ಗೆಳತಿ, ಮಾತಿರದೆ
ಅಜ್ಞಾತ ಸಹಯಾತ್ರಿಕ ನಾನು
ಬಲ್ಲೆನು ನಿನ್ನೆದೆ ತುಡಿತಗಳ
ಅರಿಯದೆ ವಿನಿಮಯ ಮಾಡಿದೆವೆ
ಎಷ್ಟೋ ಬಯಕೆಗಳ, ಮತ್ತೆ ನೋವುಗಳ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!