ಈ ದಿನ ರಾಯನು ಚಿಟ್ಟಿ ಚಿಟ್ಟಿ ಬ್ಯಾಂಗ್ ಬ್ಯಾಂಗ್. ಅನ್ನುವ ಒಂದು ಸಿನಿಮಾ ಬಗ್ಗೆ ಹೇಳಿದ . ಚಂದಮಾಮಾ ಕತೆಗಳಂತೆ. ಅದ್ಭುತ ರಮ್ಯ ಕತೆಗಳ ಸಾಲಿಗೆ ಸೇರುವ ಇದು ಮನೋರಂಜಕವಾಗಿಯೂ ಕಣ್ಣಿಗೆ ಆನಂದವನ್ನುಂದು ಮಾಡುವುದಾಗಿಯೂ ಇತ್ತಂತೆ. ಇಂಗ್ಲಂಡಿನ ಗುಡ್ಡ ಬೆಟ್ಟ ಸಮುದ್ರ ಹುಲ್ಲುಗಾವಲುಗಳ ಸುಂದರ ದೃಶ್ಯಾವಳಿಗಳು ಇವೆಯಂತೆ.
ಜತೆಗೆ ಒಂದು ಶರ್ಲಾಕ್ ಹೋಮ್ಸ ಚಿತ್ರದ ಒಂದು ಅರ್ಧ ಭಾಗವನ್ನು ನೋಡಿದ. ಶರ್ಲಾಕ್ ಹೋಮ್ಸನ ಜೀವನದಲ್ಲಿ ಭಾವನೆಗಳಿಗೆ ಎಡೆಯೇ ಇಲ್ಲ. ಕೇವಲ ಬುದ್ದಿಶಕ್ತಿ ಹಾಗೂ ತರ್ಕಗಳು ಅಲ್ಲಿ. ಏಕೆ? ಅದಕ್ಕೆ ಅವನ ಬಾಲ್ಯದ ಘಟನೆಗಳು ಕಾರಣ. ಈ ಚಿತ್ರದ ಆರಂಭದಲ್ಲಿ ಅದನ್ನು ಚಿತ್ರಿಸಲಾಗಿದೆ. ತನ್ನ ಬಾಲ್ಯದಲ್ಲಿ ಇತರ ಹುಡುಗರು ಇವನಿಗೆ ಕೊಡುವ ತೊಂದರೆಗಳನ್ನು ಹೇಗೆ ತನ್ನ ಬುದ್ಧಿಯ ಮತ್ತು ತರ್ಕಶಕ್ತಿಯ ಬಲದಿಂದ ಎದುರಿಸುತ್ತಾನೆ ಎಂಬುದು ನೋಡತಕ್ಕ ಸಂಗತಿ ಎಂದು ಹೇಳಿದ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!